“ಕರುಳಬಳ್ಳಿಗೆಕುಡಿಯುಭಾರವೇ?”ನಾಗರತ್ನ‌ಎಚ್ ಗಂಗಾವತಿ ಅವರ ಸಣ್ಣ ಕಥೆ

ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎನ್ನುವ ಗಾದೆ ಮಾತಿನಂತೆ. ಹಾಗೆಯೇ ಪ್ರೀತಿಗೆ ಮಿಗಿಲಾದ ಧರ್ಮವಿಲ್ಲ. ದಾನಕ್ಕೆ ಮೀರಿದ ಕರ್ಮವಿಲ್ಲ ಎಂಬಂತೆ  ಪ್ರತಿಯೊಬ್ಬ ತಾಯಿ ಕೂಡ ಮಕ್ಕಳ ಹಿತವನ್ನೇ ಬಯಸುತ್ತಾಳೆˌ  ಮಕ್ಕಳ ಸರ್ವತೋಮುಖ ಏಳಿಗೆಗಾಗಿ ಶ್ರಮಿಸುತ್ತಾಳೆ. ಎಂಬುದು ನಮಗೆ ನಿಮಗೆಲ್ಲಾ ತಿಳಿದ ವಿಚಾರ. ಅದೊಂದು ಊರಿನಲ್ಲಿ ಗಿರಿಜಾ ಎನ್ನುವ ಯುವತಿ ಇದ್ದಳು. ತುಂಬಾ ಕಡು ಬಡತನದಲ್ಲಿ ಬೆಳೆದಿದ್ದರೂ ಇದ್ದುದರಲ್ಲಿ ಎಲ್ಲರಗೂ ಹಂಚಿ ತಿನ್ನುವ ಗುಣ ಉಳ್ಳವಳಾಗಿದ್ದಳು.

ತಂದೆ ತಾಯಿಯ ಇಚ್ಛೆಯಂತೆಯೇ ವಿವಾಹವಾದಳು.  ಸಂಸಾರದ ಬಂಡಿ ಸಾಗಿದಂತೆ ಕೆಲವು ದಿನಗಳ ನಂತರ ಅವಳಿಗೊಂದು ಗಂಡು ಮಗು ಜನನವಾಯಿತು. ಆದರೆ ಗಂಡನ ಬೇಜವಾಬ್ದಾರಿತನದಿಂದಾಗಿ ಜೀವನ ಸಾಗಿಸುವುದು ಕಷ್ಟವಾಗತೊಡಗಿತು ಕೂಲಿನಾಲಿ ಮಾಡಿ ಮಗನ ವಿದ್ಯಾಭ್ಯಾಸ ಮಾಡಿಸಿದಳು. ಮಗನು ಕೂಡ ತುಂಬಾ ಚೆನ್ನಾಗಿ ಓದುತ್ತಾ ಇರುವ ಸಮಯದಲ್ಲಿ ಅನಾರೋಗ್ಯ ಉಂಟಾಗಿ ದೈಹಿಕ ಚಲನ ವಲನ  ಮತ್ತು ಮಾತಿನ ತೊಂದರೆ ಉಂಟಾಗಿ ತುಂಬಾ ತೊಂದರೆ ಈಡಾದನು. ಆಗ ತಾಯಿ ಮಗನ ಆರೋಗ್ಯದ ಸಲುವಾಗಿ ಕಂಡ ಕಂಡ ದೇವರನ್ನೆಲ್ಲ ಬೇಡಿ ಹರಕೆ ಹೊತ್ತರೂ ವಾಸಿಯಾಗದ ಕಾಯಿಲೆಯನ್ನು ನಿವಾರಿಸಲು
ತನ್ನಲ್ಲಿದ್ದ ಅಲ್ಪಸಲ್ಪ ಜಮೀನನ್ನು ಮಾರಿ ಆಸ್ಪತ್ರೆಗಳಿಗೂ ತೋರಿಸಿದಳು ಆದರೂ ಮಗನ ಸ್ಥಿತಿ ದಿನದಿಂದ ದಿನಕ್ಕೆ ಉಲ್ಬಣವಾಗಿ ಗಂಭೀರವಾಗತೊಡಗಿತು. ಇದನ್ನರಿತ ತಾಯಿಯ ಮನಸ್ಥಿತಿ ತುಂಬಾ ದುಃಖದಲ್ಲಿ ಮುಳುಗಿತು. ಇದೆ ಸಮಯದಲ್ಲಿ ‌ ಅವಳ ತಂದೆಯ ಕೂಡ ಆಕೆಯ ಗಂಡನ ಬೇಜವಾಬ್ದಾರಿ ಮತ್ತು ಮಗುವಿನ ಸ್ಥಿತಿಯನ್ನು ನೋಡಿ ತುಂಬಾ ಕಣ್ಣೀರನ್ನು ಹಾಕುತ್ತಾ ವ್ಯಥೆಯನ್ನು ಅನುಭವಿಸಿದನು.  
ಮಗಳಿಗೆ ಕಷ್ಟಕ್ಕೆ ಸ್ಪಂದಿಸಿ ಧೈರ್ಯ ತುಂಬಿ  ಕೈಲಾದ ಸಹಾಯವನ್ನು ಮಾಡಿದನು. ಮಗಳು ಹಾಗೂ ಮೊಮ್ಮಗನನ್ನು ಜೊತೆಗೆ ಕರೆದುಕೊಂಡು ಹೋಗಿ ತನಗೆ ಪರಿಚಯವಿದ್ದ ಕಡೆಗೆಳಲ್ಲೆಲ್ಲಾ  ಚಿಕಿತ್ಸೆ ಕೊಡಿಸಲು ಪ್ರಯತ್ನ ಮಾಡಿದನು.

ತಾಯಿಯೂ… ಇಂಥ ಮಗುವನ್ನು ಕೆಲಸಕ್ಕೆ ಕರೆದುಕೊಂಡು ಹೋಗುವುದು ಕಷ್ಟಕರ ಹಾಗೂ ಅಲ್ಲಿ ಕೆಲಸಗಳನ್ನು ನಿಭಾಯಿಸುವುದು ಅಷ್ಟೇ ಕಷ್ಟವಾಗುತ್ತಿತ್ತು.  ಧೈರ್ಯ ಮಾಡಿ ಮತ್ತೊಂದು ಹೆಜ್ಜೆ ಇಟ್ಟು ಬೇರೆ ಕಡೆ ಚಿಕಿತ್ಸೆ ಕೊಡಿಸಲು ಮುಂದಾದಳು ತನ್ನ ಮನದಲ್ಲಿಂದ ಆಲೋಚನೆ ಒಂದೇ
ನಾಳೆ ನಾನು ತೀರಿ ಹೋದರೆ ನನ್ನ ಮಗನು ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವಷ್ಟು ಆರೋಗ್ಯ ಸುಧಾರಣೆ ಆದರೆ ಸಾಕು ಎನ್ನುವ ನಿರೀಕ್ಷೆಯನ್ನು ಮನದಲ್ಲಿಟ್ಟುಕೊಂಡಿದ್ದಳು.

ಚಿಕಿತ್ಸೆ ಕೊಡಿಸಲು ಸಾವಿರಾರು ರೂಪಾಯಿಗಳು ಬೇಕಾಗುತ್ತದೆ ಎಂದು ಯೋಚನೆ ಮಾಡುವ ಸಮಯದಲ್ಲಿ ಯಾರೋ ಒಬ್ಬ ವ್ಯಕ್ತಿ ಅಪದ್ಬಾಂಧವನಂತೆ ಮುಂದೆ ಬಂದುˌ ಅವಳ ತೊಂದರೆಯನ್ನು ನೋಡಿ ಕೈಲಾದ ಚಿಕ್ಕ ಸಹಾಯ ಮಾಡಿದನು ಆ ಚಿಕ್ಕ ಸಹಾಯವೇ ಆ ಮಗುವಿಗೆ ಚಿಕಿತ್ಸೆ ಕೊಡಿಸಲು ಅನುವಾಗಿ ಮಗುವಿನ ದೊಡ್ಡ ಭವಿಷ್ಯಕ್ಕೆ ಉಜ್ವಲ ಜೀವನವನ್ನು ಒದಗಿಸಿದಂತಾಯಿತು.

ಆಗ ಚಿಕಿತ್ಸೆ ಯಶಸ್ವಿಯಾಗಿ ಮಗನು ಕೆಲ ದಿನಗಳ ನಂತರ ಗುಣಮುಖನಾದನು ಏನೇ ಆದರೂ ಸರಿ ತಾಯಿಯ ಪ್ರೀತಿಗೆ ಕೊನೆಯಿಲ್ಲ ಮತ್ತು ಯಾರೇ ಆಗಲಿ ಕಷ್ಟದಲ್ಲಿದ್ದಾಗ ಮಾಡುವ ಒಂದು ಚಿಕ್ಕ ಸಹಾಯವು ಕೂಡ ದೊಡ್ಡ ಪ್ರಮಾಣದ ಬದಲಾವಣೆಯನ್ನು ಕಾಣಬಹುದಲ್ಲವೆ. ? ಹಾಗಾಗಿ ಪ್ರತಿಯೊಬ್ಬರೂ ಕೂಡ ಕಷ್ಟದಲ್ಲಿರುವವರಿಗೆ ತಮಗೆ ಕೈಲಾದಷ್ಟು ಸಹಾಯ ಮಾಡಿದರೆ ಭಗವಂತನು ಕೂಡ ಒಳ್ಳೆಯ ಫಲವನ್ನೇ ನೀಡುತ್ತಾನೆ ಎಂದು ಹೇಳಬಹುದು. ದಾನ ಧರ್ಮ ಮಾಡುವುದರಿಂದ ಮನುಷ್ಯನು ಮತ್ತಷ್ಟು ಉನ್ನತ ಸ್ಥಾನಕ್ಕೆ ಏರಬಹುದು ಅಷ್ಟೇ ಅಲ್ಲದೆ
ಕೋಟಿ ಕೋಟಿ ಇದ್ದರೇನು ತಿನ್ನುವ ಅನ್ನವು ಒಂದೇ ಹಾಗಾಗಿ ಕಷ್ಟ ಸುಖ ಎರಡು ಶಾಶ್ವತವಲ್ಲ  ಸಹಾಯ ಮನೋಭಾವನೆ ಬೆಳೆಸಿಕೊಂಡರೆ ಭಗವಂತ ನೀಡಿದ ಮಾನವು ಜನ್ಮ ಸಾರ್ಥಕವಾಗುತ್ತದೆ. ಹೆತ್ತ ತಾಯಿಯ ಋಣವ ಹೊತ್ತ ಭೂಮಿಯ ಋಣವ ಎಂದೂ ಮರೆಯದಿರು . ತಾಯಿಯ ಪ್ರೀತಿ ಸ್ವರ್ಗಕ್ಕಿಂತ ಮಿಗಿಲಾದದ್ದು.


Leave a Reply

Back To Top