ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
“ಬೆಳಗಾವಿ ಅಧಿವೇಶನ”
ಬೆಳಗಾವಿಯ ಸುವರ್ಣ ಸೌಧದಲ್ಲಿ
ಹತ್ತು ದಿನಗಳ ಚಳಿಗಾಲದ ಅಧಿವೇಶನದಲ್ಲಿ
ಪಕ್ಷ ವಿಪಕ್ಷಗಳ ಮಾತಿನ ಚಕಮಕಿ ಭರದಲ್ಲಿ
ಒಂದು ಕಡೆಗಿರುವುದು ಆಡಳಿತ ಪಕ್ಷ
ಎದುರುಗಡೆಯಲ್ಲಿಯೇ ವಿರೋಧ ಪಕ್ಷ
ಇವರಿಬ್ಬರ ಮಧ್ಯೆ ಮೇಲ್ಗಡೆ ಸಭಾಧ್ಯಕ್ಷ
ಆಡಳಿತ ವಿರೋಧ ಪಕ್ಷಗಳ ಪ್ರಶ್ನೋತ್ತರ
ಮುಡಾ ಅಕ್ರಮ ಅಬಕಾರಿ ಭ್ರಷ್ಟಾಚಾರ
ಶಿಶುಗಳ ಬಾಣಂತಿಯರ ಸಾವಿನ ವಿಚಾರ
ಪಕ್ಷದೊಳಗಿನ ಬಣಗಳ ನಡುವೆ ಬಡಿದಾಟ
ಪಂಚಮಸಾಲಿ ಮೀಸಲಾತಿಗೆ ಹೋರಾಟ
ನೇಕಾರ ಕಾರ್ಮಿಕರ ಸಮಸ್ಯೆಗಳ ಪರದಾಟ
ವಕ್ಫ ಹೆಸರು ರೈತರ ಜಮೀನಿನ ಪಹಣಿಯಲ್ಲಿ
ವಿಪಕ್ಷದ ನಾಯಕರು ವಿರೋಧಿಸಿದರಲ್ಲಿ
ಎಲ್ಲ ಪ್ರಕರಣಗಳ ಸದ್ದು ಗದ್ದಲ ಸದನದಲ್ಲಿ
ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ
ವಿವಿಧ ಸಂಘಟನಾ ಸಂಸ್ಥೆಗಳು ಪ್ರತಿಭಟಿಸಿ
ಒತ್ತಾಯಿಸಿದರು ಸರ್ಕಾರಕ್ಕೆ ಧರಣಿ ನಡೆಸಿ
ವಸತಿ ಊಟೋಪಚಾರ ಸಾರಿಗೆ ವ್ಯವಸ್ಥೆಗಾಗಿ
ಸಚಿವರು ಅಧಿಕಾರಿಗಳ ಆತಿಥ್ಯಕ್ಕಾಗಿ
ಕೋಟಿಗಟ್ಟಲೆ ಖರ್ಚು ವೆಚ್ಚ ಹೆಚ್ಚಾಗಿ
ಸರ್ಕಾರದ ಹಣ ಪೋಲಾದರೂ ಫಲವಿಲ್ಲ
ಅಧಿವೇಶನವು ಕಾಟಾಚಾರದಂತೆ ಆಗದಿರಲಿ
ಸಮಸ್ಯೆಗಳು ಬಗೆಹರಿದು ಅಭಿವೃದ್ಧಿ ಇರಲಿ
(ಕನಿಷ್ಠ ಮುಂದಿನ ಅಧಿವೇಶನದಲಿ)
ಜಯಶ್ರೀ ಎಸ್ ಪಾಟೀಲ