ಜಲದ ಮಂಟಪದ ಮೇಲೆ ಉರಿಯ ಚಪ್ಪರವನಿಕ್ಕಿ
 ಆಲಿಕಲ್ಲ ಹಸೆಯ ಹಾಸಿ ಬಾಸಿಂಗವ ಕಟ್ಟಿ
 ಕಾಲಿಲ್ಲದ ಹೆಂಡತಿಗೆ ತಲೆಯಿಲ್ಲದ ಗಂಡ ಬಂದು ಮುಟ್ಟಿದನು ನೋಡಾ
 ಎಂದೆಂದೂ ಬಿಡದ ಬಾಳುವೆಗೆ
 ಕೊಟ್ಟರೆನ್ನ ಚೆನ್ನಮಲ್ಲಿಕಾರ್ಜುನಯ್ಯನಿಗೆ

ಇಲ್ಲಿ ಜಲ ಅಂದರೆ ನೀರು .ನೀರು ನಿಂತಲ್ಲೇ ನಿಲ್ಲದು ಅದರ ಗುಣ ಹರಿಯುವುದು. ಹಾಗೇ ಮನಸ್ಸೂ ಕೂಡಾ ನಿಂತಲ್ಲೇ ನಿಲ್ಲದೇ ಹರಿಯುವ ನೀರಿನಂತೆ ಇರುವ ಈ ಮನಸ್ಸಿಗೆ .ಕ್ರೋಧಾದಿಗಳು ಎಂದರೆ ಆಲಿಕಲ್ಲು .
ಆಲಿಕಲ್ಲು ನೀರಿನಲ್ಲಿ ಸೇರಿದರೆ ಕರಗಿ ನೀರಾಗುವಂತೆ .
ನನ್ನ ಮನದಲ್ಲಿ ಈ ಕ್ರೋದಾಧಿಗಳು  ತುಂಬಿ ಹರಿಯುವಂತಾಗಿ ಬಿಟ್ಟಿದೆ ಹೇ ಚೆನ್ನಮಲ್ಲಿಕಾರ್ಜುನಾ.

ಜಲದ ಮಂಟಪ ಹೇಗೆ ಸಾಧ್ಯ? ಉರಿಯ ಚಪ್ಪರವನ್ನು ಹಾಕಲು ಸಾಧ್ಯವೇ ? ಅಕ್ಕನವರ ಈ ವಚನದ ಸಾಲುಗಳು ,
ನಮ್ಮೊಳಗಿರುವ ಮನ ಬೆಂಕಿಯ ಹಾಗೆ ಆ ಬೆಂಕಿಯನ್ನು ನಂದಿಸಲು ನೀರು ತಾನೇ ಬೇಕಲ್ಲವೇ? ನೀರೂ ನಮ್ಮಲ್ಲಿದೆ ಬೆಂಕಿಯೂ ನಮ್ಮಲ್ಲಿದೆ
ಹರಿಯುವ ಮನ ಜಲ ಕುದಿಯುವ  ಜಲವನ್ನು ತನ್ನಗಾಗಿಸಲೇ ಬೇಕು .
ಹಾಗೇ ನನ್ನ ಮನ ಆಗಿದೆ ಚನ್ನಮಲ್ಲಿಕಾರ್ಜುನಾ .
ನಿನದೇ ನೆನಪಿನಲ್ಲಿ ನನ್ನ ಮನ ಹೀಗಾಗಿದೆ ಎನ್ನುವ ಭಾವ.
ಉರಿಯ ಚಪ್ಪರ ಹಾಕಿ,ಜಲದ ಮಂಟಪದಲ್ಲಿ ನನ್ನನ್ನು ಕುಳ್ಳರಿಸುತ್ತಿರುವರವ್ವ

 ಆಲಿಕಲ್ಲ ಹಸೆಯ ಹಾಸಿ ಬಾಸಿಂಗವ ಕಟ್ಟಿ

ಆಲಿಯ ಕಲ್ಲು ನೀರು ಹಾಗೂ ಬೆಂಕಿಗೆ ಕರಗಿ ಹೋಗುವ ಗುಣ ಸ್ವಭಾವ.
ಸಾಮಾನ್ಯವಾಗಿ ಮದುವೆಯ ಸಂದರ್ಭದಲ್ಲಿ ಹಸೆಮನೆ ಏರುವ ವಧು -ವರರಿಗೆ ಹಾಸಕ್ಕಿಯ ಹಾಸಿ ಅದರ ಮೇಲೆ ಕುಳ್ಳರಿಸಿ ಮಾಂಗಲ್ಯ ಧಾರಣ ಮಾಡುವ ಸಂಪ್ರದಾಯ.
ನನಗೆ ಆಲಿಯ ಕಲ್ಲಿನಿಂದ ಹಾಸಕ್ಕಿ ಹಾಸಿ ,ಬಾಸಿಂಗ ಕಟ್ಟುವ ಇವರ ಅಜ್ಞಾನಕ್ಕೆ ಏನು ಅನ್ನಲಿ ಎನ್ನುವ ಅಕ್ಕನವರ ಭಾವ ಇಲ್ಲಿ ಅಭಿವ್ಯಕ್ತಗೊಂಡಿದೆ .
ಇವರು ನನಗೆ ಕಟ್ಟುವ ಬಾಸಿಂಗ ಹಾಗೂ ಹಾಸುವ ಹಾಸಕ್ಕಿ ವ್ಯರ್ಥ. ಎನ್ನುವುದು ಅಕ್ಕಮಹಾದೇವಿಯವರಿಗೆ ಮೊದಲೇ ಗೊತ್ತಿತ್ತು .ನೀವು ಏನೇ ಮಾಡಿದರೂ ಅದು ಹರಿದು ಹೋಗುವ ಬಯಲು ಪ್ರದೇಶ.

 ಕಾಲಿಲ್ಲದ ಹೆಂಡತಿಗೆ ತಲೆಯಿಲ್ಲದ ಗಂಡ ಬಂದು ಮುಟ್ಟಿದನು ನೋಡಾ

ಎಂಥಹ ದಿವ್ಯ ಅನುಭವ ಭಾವ ಅಕ್ಕನವರದು .ಇಲ್ಲಿ ಕಾಲಿಲ್ಲದ ಗಂಡ ಎಂದರೆ ಲಿಂಗ ಸ್ವರೂಪಿಯಾದ ಚೆನ್ನಮಲ್ಲಿಕಾರ್ಜುನ  ಎನ್ನುವ ಅರಿವು .ಆ ನನ್ನ ಚನ್ನಮಲ್ಲಿಕಾರ್ಜುನನಿಗೆ ತಲೆಯಿಲ್ಲ ಅಂದರೆ ಬಯಲು .  ನನಗೆ ಕಾಲಿಲ್ಲ ಅಂದರೆ ನನಗೆ ಸಂಸಾರ ಇಲ್ಲ ಎನ್ನುವ ಅರ್ಥ. ತನ್ನ ಕರದಲ್ಲೇ ಪ್ರತಿಷ್ಠಾಪಿಸಿಕೊಂಡ ಲಿಂಗದಲ್ಲೇ ತನ್ನ ಚೆನ್ನಮಲ್ಲಿಕಾರ್ಜುನನ್ನು ಕಾಣುವ ಅಕ್ಕನವರು ಶರಣ ಸತಿಯಾಗಿ, ತನ್ನ ಅಂಗದಲ್ಲಿರುವ ಲಿಂಗವೇ ಪತಿ ಎಂದು ಭಾವಿಸಿದ ಪ್ರಪ್ರಥಮ ಶಿವಶರಣೆ ಅಕ್ಕಮಹಾದೇವಿಯವರು ಆಗಿದ್ದಾರೆ .
ನನ್ನನ್ನು ಸ್ಪರ್ಶಿಸಿದ್ದು ಆ ಚೆನ್ನಮಲ್ಲಿಕಾರ್ಜುನನೇ ಎಂದುಟ ಹೇಳುವ ಅಕ್ಕನವರ ಭಾವ.

 ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ ಚೆನ್ನಮಲ್ಲಿಕಾರ್ಜುನಯ್ಯನಿಗೆ

ನನ್ನ ಅರಿವಿನ  ಗುರುವಾಗಿ ಜ್ಞಾನ ಬೆಳಗುವ ಗಂಡನಾದ ಚೆನ್ನಮಲ್ಲಿಕಾರ್ಜುನನೊಂದಿಗೆ ನನಗೆ ಮದುವೆಯ ಮಾಡಿ ಕೊಟ್ಟರವ್ವ ಇದು ನನಗೆ ಬಿಡದ ನಂಟಿನ ಬಾಳುವೆ .

Leave a Reply

Back To Top