ಕಾವ್ಯ ಸಂಗಾತಿ
ಕಾವ್ಯ ಪ್ರಸಾದ್
“ಸತ್ಯ ಸುಳ್ಳಿನ ಜೊತೆ ಪ್ರೇಮ ಪ್ರಯಾಣ”
ನೀ ಕೇಳು ನಾನೆಂದು ನಿನ್ನ ನೋಡಲೇ ಇಲ್ಲ
ನಿನ್ನ ಕಂಡು ಎಂದು ಏನನ್ನು ಕೇಳಲೇ ಇಲ್ಲ!
ಆದರೂ ಹುಡುಕಿ ನನ್ನ ಹಿಂದೆ ಬಂದೆಯಲ್ಲ
ಪ್ರೀತಿಯ ಹೆಸರು ಹೇಳಿ ನನ್ನ ಸೆಳೆದೆಯಲ್ಲ!!
ಇದು ತಿಳಿಯದ ಯಾವ ರೀತಿಯ ಪ್ರೀತಿಯೋ
ಅರಿವಿಲ್ಲದ ಯಾವ ರೀತಿಯ ಮಾಯೆಯೋ!
ತಿಳಿಯದೆ ಎಲ್ಲವ ನೀನೆ ಹೇಳಿ ಹೋದೆಯೋ
ಯಾವ ದಾರಿ ಹಾದಿಯ ಹುಡುಕಿ ಬಂದೆಯೋ!!
ಪ್ರೇಮ ಕುರುಡೆಂದು ತಿಳಿಯದೆ ಹೋದೆನಲ್ಲ
ಹೆತ್ತು ಹೊತ್ತವರ ಮರೆತು ಹಿಂದೆ ಬಂದೆನಲ್ಲ!
ನಿನ್ನ ನಂಬಿ ನನ್ನವರಿಗೆ ಮೋಸ ಮಾಡಿದೆನಲ್ಲ
ನಾ ಮಾಡಿದ ತಪ್ಪಿಗೆ ಭಗವಂತನು ಕ್ಷಮಿಸುವುದಿಲ್ಲ!!
ಅತಿ ಪ್ರೀತಿ ವಿಷವಾಗಿದೆ ಇಂದು ನಿನಗೆ ಸರಿಯೋ
ಕಾಲ ಚಕ್ರವು ತಿರುಗುತಿದೆ ಇದು ಎಂತ ವಿಧಿಯೋ!
ಸತ್ಯ ಸುಳ್ಳಿನ ಜೊತೆ ನಮ್ಮ ಪ್ರೇಮ ಪ್ರಯಾಣ ನೀ ತಿಳಿಯೋ
ನಿನ್ನ ಬದುಕಲಿ ಬಂದಿರುವ ಹೆಣ್ಣನು ಮೊದಲು ಅರಿಯೋ!!
ಕಾವ್ಯ ಪ್ರಸಾದ್
Supper. Ri
ಚೆಂದದ ಕವಿತೆ