ಕಾವ್ಯ ಸಂಗಾತಿ
ಪಿ.ವೆಂಕಟಾಚಲಯ್ಯ
“ನೀಲಗಿರಿ – ದೇವದಾರುವಿನೈಸಿರಿ.”
ಕಾಡಿನ ಹೆದ್ದಾರಿಯಲಿ , ನೆಮ್ಮದಿಯಿಂ ಸಾಗುತಿರೆ.
ವಿಕಸಿತ ಜೀವಜಾಲ, ಕವಿದ ಮಂಜಿನಾ ವರಣ.
ಜೀವಜಂತುಗಳೆನೆತೋ,ಕೌತುಕದಿಂ ನೋ ಡುತಲಿ,
ಗಮ್ಯಸ್ಥಾನವು ದೂರ, ಅಂತೂ ಸಾಗಿದೆ ಪಯಣ.
ನೀಲಾಕಾಶವ ಮುಟ್ಟಿ, ತಾ ಚುಂಬಿಸುವ ತೆರದಲಿ,
ಬಾನುನಿಂದಿಳಿದ ಮೋಡ, ಅಚ್ಚಾದಿತ ಗಿರಿಪಂಕ್ತಿ.
ಬೆಟ್ಟವೇರುತಿದೆ ಕಾರು, ಅಂಕುಡೊಂಕು ರಸ್ತೆಯಲಿ.
ಎರಡು ಬದಿ ಬೆಟ್ಟ ಗುಡ್ಡ, ತರುಲತೆಗಳ ಹಿಂದಿಕ್ಕಿ.
ಜಿಗಟು ಪಸೆಯ ಮಣ್ಣಿನಲಿ, ಮೊ ಳೆತು ನೆಗಲ್ದ ತರುಲತೆ.
ಬೆಟ್ಟದ ಇಳಿಜಾರಿನಲಿ, ಜಿನುಗುತ ಜಾರು ವ ಊಟೆ.
ಪೈನ್, ನೀಲಗಿರಿ ಕಾಡು, ಬಾನಂಗ ಲದಿ ತೂಗಿರೆ.
ಪ್ರಕೃತಿ ಆಡಂಬೋಲ, ವಿಶ್ಮಯವೆನ ತು ಕಾಣಿರೆ.
ತಗ್ಗು ದಿನ್ನೆ ಏರಿಳಿತ, ಹಳ್ಳ ಕೊಳ್ಳ ಗಳ ನಗರಿ.
ಸರ್ವತ್ರ ತಂಪಿನ ನೆಲೆ , ದೇವದಾರು ವನೈಸಿರಿ.
ಗುಲಾಬಿ ತೋಟವು ಉಂಟು!, ಸಸ್ಯ ತೋಟವೂ ಉಂಟು! ,
ಲಾಲ್ ಬಾಗ್ ಕಬ್ಬನ್ ಪಾರ್ಕಿಗೆ! , ಸರಿಸಾಟಿಯು ಎಲ್ಲುಂಟು.?
ಪಿ.ವೆಂಕಟಾಚಲಯ್ಯ.