ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಕಾಫಿಯಾನ ಗಜಲ್ ೪೭(ಮಾತ್ರೆಗಳು೨೦)

ವಸುಂಧರೆಯ ಒಡಲಿಗೆ ಧಾನ್ಯ ಸಿರಿ ತುಂಬುವನು
ಧರಣಿಗೆ ಸಂಭ್ರಮದಿ ಹಸಿರು ಸೀರೆ ಉಡಿಸುವನು

ಬಾಳಿಗೆ ಅನ್ನ ಆಧಾರ ಉಳಿಸುವುದು ಉಸಿರು
ವಿಶ್ವದ ಸಕಲ ಜೀವರಾಶಿಯನು ಸಲಹುವನು

ಶರಣರ ಸಂತರ ತತ್ವ ತಿಳಿದು ಬಾಳ ಬೇಕು
ದಿನ ಕಾಯಕ ದಾಸೋಹ ನಿಯಮ ಪಾಲಿಸುವನು

ಪ್ರಕೃತಿ ಮುನಿದರೆ ಜಗಕೆಲ್ಲ ಬರಗಾಲ ನೋಡು
ಕಾತುರದಿ ವರುಣನ ಆಗಮನವ ಕಾಯುವನು

ನಿತ್ಯ ಕಷ್ಟದ ಬದುಕು ನಡೆಸುವ ಅನ್ನದಾತ
ನೇಸರನ ಚೈತನ್ಯ ಪ್ರಭೆಯನು ಬಯಸುವನು


Leave a Reply

Back To Top