ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ʼಒಂದು ಸೂತ್ರದ ನೆರಳಿಗೆ….ʼ
ನೆರಳಿಗೆ ಒಂದು
ಉಪಕಾರದ ನೆನೆಕೆ
ಬದುಕಾಗುವ ಜೀವ
ನೆಲೆಯಾಗುವ ಉಸಿರು
ಸುತ್ತ ತುಂಬಿರುವ ಇಳೆ
ಹೂವೊಳಗೂ ಒಲವ ಸೆಲೆ
ನೀರೊಳಗೆ ಜೀವ
ಭಾವದ ಬೆಳಕು
ಮೊಗದಿ ಚೆಲ್ಲುವ ನಸು ನಗು
ಹರಿವ ಲಹರಿ
ಹಾರೋ ಹಕ್ಕಿ
ಗೂಡು ತುಂಬಿದ ಹಾಡು
ಇಂಪಿನ ಕಂಪಿನ ಹಸಿರು
ಮಣ್ಣ ಸನಿಹದಿ
ಕುತೂಹಲದ ಬಿಂದು
ಬಣ್ಣ ಹರಡಿದ ಹಗಲು
ಜೋಗುಳದ ಇರುಳು
ಹಲವು ಭಾವದ ಬೆರಗು
ಒಂದು ಸೂತ್ರದ ನೆರಳಿಗೆ
ಒಂದು ಉಸಿರಿನ ಉಸಿರಿಗೆ
ನಾಗರಾಜ ಬಿ.ನಾಯ್ಕ.
ಗಾಢ ಅರ್ಥವನ್ನು ಹೇಳುವ ಕವಿತೆ