ಕಾವ್ಯ ಸಂಗಾತಿ
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ
ಶಾಯರಿಗಳು
೦೧
ಇಂಥ ಬಿರುಗಾಳಿಗೂ ಸಮುದ್ರದ ಅಲೆಗಳು ಯಾಕ ಸುಮ್ಮಕ ಕುಂತಾವಂತ ನೋಡಿದ್ರ,
ಅಲ್ಲಿ ನಿನ್ನ ನಗುವಿನ ಅಲೆಗಳು ತೇಲಾಡ್ತಾ ಇದ್ವು.
೦೨
ಈ ಮಂದಿ ಹೇಳಾಕಂತರ ನೀ ಹೋದ್ಮೇಲೆ ನಾ ಒಂಟಿಯಾಗಿನಿ ಅಂತ!
ಅವರಿಗೇನ ಗೊತ್ತು ನೀ ನನ್ನ ಹೃದಯದಾಗ ಕುಂತಿ ಅಂತ!
೦೩
ನಾನಿರುಮಟ ನಿನ್ನ ನೆನಪು
ಮಾಸಂಗಿಲ್ಲ.
ನಿನ್ನ ನೆನಪು ಮಾಸಿದ
ದಿನ ನಾನಿರಂಗಿಲ್ಲ..
೦೪
ಎಷ್ಟ ದೀಪಾ ಹಚ್ಚಿದ್ರು ಈ ಮನೆ ಮನಸಿನ ಕತ್ಲು ಹೋಗಲೆ ಇಲ್ಲ.
ನೀ ಬಂದ ಮ್ಯಾಲ ಇವತ್ತಿಗೂ ಕತ್ಲು ಹಂತೆಕ ಸುಳಿದೇ ಇಲ್ಲ.
೦೫
ಮದುವೆಯಾಗೊಕ್ಕಿಂತ ಮುಂಚೆ ಹುಡುಗ ಬೀದಿ ಬೀದಿ ಅಲಿಯೋ ಬೀದಿ ನಾಯಿ ಇದ್ದಂಗ.
ಮದುವೆ ಆದ ಮೇಲೆ ಯಜಮಾನಿಯ ಮುಂದ ಬಾಲ ಅಲ್ಲಾಡಿಸೊ ಮನಿ ನಾಯಿ ಇದ್ದಂಗ.
೦೬
ನೀ ಬಾಳ ಬಾಳ ಪುಣ್ಯ ಮಾಡಿ ನೋಡು, ನಿನ್ನ ಕನಸ ಮನಸನ್ಯಾಗು ನಾ ಕಾಡಂಗಿಲ್ಲ.
ನಾನೇನು ಪಾಪ ಮಾಡಿನಿ ಅಂತಿನಿ,
ಮೂರು ಹೊತ್ತು ನಿನ್ನ ದ್ಯಾನದಾಗ ಇರ್ತಿನಿ..
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ
ಸೂಪರ್ ಸರ್