ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಗಜಲ್
ಮುಚ್ಚದ ರೆಪ್ಪೆಗಳಿಗೂ ನಿನ್ನದೆ ಕನವರಿಕೆ
ಬಿಚ್ಚದ ನುಡಿಗಳಿಗೂ ನಿನ್ನದೆ ಕನವರಿಕೆ
ಸದರ ಬಯಸುವ ಮನಸಿಗೆ ಸಿಗಲಿಲ್ಲವೇಕೆ
ಮೋದದ ಸ್ವಪ್ನಗಳಿಗೂ ನಿನ್ನದೆ ಕನವರಿಕೆ
ಕಾಡುವ ಚಂದ್ರನಂತೆ ಎದೆಯಲಿ ಇಣುಕಿದೆ
ಓಡುವ ಮೋಡಗಳಿಗೂ ನಿನ್ನದೆ ಕನವರಿಕೆ
ಉರುಳುವ ಕಾಲ ಸ್ತಬ್ಧವಾಗಿ ನಿಂತಿತಲ್ಲ
ಅರಳಿದ ಸುಮಗಳಿಗೂ ನಿನ್ನದೆ ಕನವರಿಕೆ
ಮರುಗುವ ಹೃದಯ ಕಾಯುತಿದೆ ನೋಡು
ತಿರುಗುವ ಭೃಂಗಗಳಿಗೂ ನಿನ್ನದೆ ಕನವರಿಕೆ
ತೋಚಿದ ಬುದ್ದಿಗೆ ಮಂಕು ಕವಿಸಿರುವೆ
ಚಾಚಿದ ತೋಳುಗಳಿಗೂ ನಿನ್ನದೆ ಕನವರಿಕೆ
ಬರೆದಿಹ ಅಕ್ಷರಗಳಲಿ ಅಭಿನವನ ನೆನಪು
ಮರೆಯದ ಭಾವಗಳಿಗೂ ನಿನ್ನದೆ ಕನವರಿಕೆ
ಶಂಕರಾನಂದ ಹೆಬ್ಬಾಳ
ನಿಮ್ಮ ಗಜಲ್ ಅದ್ಭುತ ಸರ್ …