ಎಂ. ಬಿ. ಸಂತೋಷ್
ಚಳಿಗಾಲದ ಪದ್ಯೋತ್ಸವ
ಇರಲಾರೆ
ಇರಲಾರೆ ಪ್ರಿಯೆ
ಈ ಚಳಿಯಲ್ಲಿ ನಾ ಒಬ್ಬಂಟಿ
ನೀ ಹೋದಲೆಲ್ಲಾ ಹಿಂದೆ – ಹಿಂದೆ
ಬರುವುದಂತು ಗ್ಯಾರಂಟಿ
ತಬ್ಬಲಿ
ಮಾಗಿಯ ಈ ಚಳಿಯಲ್ಲಿ
ಮೈ ಜುಮ್ ಎನ್ನುವ ಹೊತ್ತಿನಲಿ
ನೀನಿಲ್ಲದಿರೆ ನನ್ನ ಬಳಿ
ಪ್ರಿಯೆ ನಾ ಯಾರ ತಬ್ಬಲಿ?
ಚಳಿ
ನೀನಿದ್ದರೆ ಸಂಗಾತಿ
ನನ್ನ ಬಳಿ
ಕಾಶ್ಮೀರದಲ್ಲಿದ್ದರೂ
ನನಗಾಗದು ಚಳಿ
ಸ್ವೇಟರ್ – ಬೆಟರ್
ಚಳಿಯಲ್ಲಿ ಬೆಚ್ಚಗಿರಲು
ಬೇಕು ಸ್ವೇಟರ್
ಇಲ್ಲದಿದ್ದರೆ ನನ್ನವಳು
ಬಳಿಯಲ್ಲಿದ್ದರೆ ಬೆಟರ್
ಪರಿಹಾರ
ಚಳಿ – ಚಳಿ ಎಂದು
ಪಡಬೇಡ ಸಂಗಾತಿ ಬೇಸರ
ಪರಿಹಾರವಿದೆ ಬಂದರೆ
ನೀ ಎನ್ನ ಹತ್ತಿರ
ಎಂ. ಬಿ. ಸಂತೋಷ್