ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ʼನೀʼ
ನೀ ಬೆಂಕಿಯಾದರೆ ನಾ ಧಗಧಗಿಸುವೆ
ನೀ ಮುಗುಳ್ನಕ್ಕರೆ ನಾ ಮಗಮಗಿಸುವೆ
ನೀ ಕಹಿಯನುಂಡರೆ ನಾ ನಂಜಾಗುವೆ
ನೀ ಸಿಹಿಯಾಗಿದ್ದರೆ ನಾ ಮಂಜಾಗುವೆ
ನೀ ಕಲ್ಲಾದರೆ ನಾ ಕಣ್ಣೀರಾಗುವೆ
ನೀ ಹುಲ್ಲಾದರೆ ನಾ ನೀರಾಗುವೆ
ನೀ ನೊಂದರೆ ನಾ ನರಳುವೆ
ನೀ ಬೆಂದರೆ ನಾ ಬಾಡುವೆ
ನೀ ಛಲವಾದರೆ ನಾ ಬಲವಾಗುವೆ
ನೀ ಒಲವಾದರೆ ನಾ ನವಿಲಾಗುವೆ
ನೀ ಅರಳಿದರೆ ನಾ
ಪರಿಮಳವಾಗುವೆ
ನೀ ಕೆರಳಿದರೆ ನಾ ಸಿಡಿಲಮರಿಯಾಗುವೆ
ನಿನ್ ಹೆಗಲ ಒಜ್ಜೆಯಾಗದೆ
ನಿನ್ನ ಕಾಲ ಗೆಜ್ಜೆಯಾಗುವೆ.
ಶೋಭಾ ಮಲ್ಲಿಕಾರ್ಜುನ್
ಅರ್ಥಪೂರ್ಣವಾಗಿ ಪದ ಪೋಣಿಕೆಯಿದೆ.. ಶುಭಾಷಯಗಳು