ದೈನಂದಿನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ಧ್ಯಾನ ….ಒಂದು ಅವಲೋಕನ
( ಡಿಸೆಂಬರ್ 21 ಪ್ರಥಮ ವಿಶ್ವ ಧ್ಯಾನ
ದಿನಾಚರಣೆ ಪ್ರಯುಕ್ತ )
ಪ್ರತಿನಿತ್ಯ ಧ್ಯಾನ ಮಾಡಬೇಕು ಧ್ಯಾನ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ವಿಶ್ರಾಂತಿ ದೊರೆಯುತ್ತದೆ. ದೇಹದ ದಣಿವಿಗೆ ವಿಶ್ರಾಂತಿ ಅಗತ್ಯವಿದ್ದಂತೆ ಮನಸ್ಸಿನ ಧಣಿವಿಗೆ ಧ್ಯಾನದ ಅಗತ್ಯವಿದೆ. ಒಬ್ಬ ವ್ಯಕ್ತಿಯು ತಾಂತ್ರಿಕವಾಗಿ ಶಕ್ತಿಯನ್ನು ಒಂದು ನಿರ್ದಿಷ್ಟ ವಸ್ತು, ಆಲೋಚನೆ ಇಲ್ಲವೇ ಚಟುವಟಿಕೆಯ ಮೇಲೆ ಕೇಂದ್ರೀಕರಿಸುವುದನ್ನು ಅಭ್ಯಸಿಸುವ ಏಕ ಮಾತ್ರ ವಿಧಾನ – ಗಮನ ಮತ್ತು ಜಾಗೃತಿಯನ್ನು ತರಬೇತಿ ಮಾಡಲು ಮತ್ತು ಮಾನಸಿಕವಾಗಿ ಸ್ಪಷ್ಟ ಮತ್ತು ಭಾವನಾತ್ಮಕವಾಗಿ ಶಾಂತ ಮತ್ತು ಸ್ಥಿರ ಸ್ಥಿತಿಯನ್ನು ಸಾಧಿಸಲು ಧ್ಯಾನ ಅತ್ಯವಶ್ಯಕ.
ಧ್ಯಾನವನ್ನು ಹಲವಾರು ಧಾರ್ಮಿಕ ಸಂಪ್ರದಾಯಗಳಲ್ಲಿ ಕೂಡ ಅಭ್ಯಾಸ ಮಾಡಲಾಗುತ್ತದೆ. ಜಪ, ತಪ, ಭಜನೆ, ಅನುಷ್ಠಾನ ಮೌನಾನುಸಂಧಾನ ಮತ್ತು ನಾದಾನುಸಂಧಾನಗಳು ಕೂಡ ಧ್ಯಾನದ ಇನ್ನುಳಿದ ಮಾದರಿಗಳು. ಇಷ್ಟಲಿಂಗ ಪೂಜೆಯಲ್ಲಿಯೂ ಕೂಡ ಕರತಲದಲ್ಲಿ ಲಿಂಗವನ್ನು ಇರಿಸಿ ಪೂಜಿಸಿ ನಂತರ ಲಿಂಗಾನು ಸಂಧಾನದ ಮೂಲಕ ಧ್ಯಾನವನ್ನು ಕೈಗೊಳ್ಳಲಾಗುತ್ತದೆ.
ಪ್ರಾಚೀನ ಕಾಲದಿಂದಲೂ ಧ್ಯಾನವನ್ನು ಭಾರತೀಯರು ಅಭ್ಯಸಿಸುತ್ತಾ ಬಂದಿದ್ದಾರೆ. ಸ್ನಾನವು ದೇಹದ ಕೊಳೆಯನ್ನು ನಿವಾರಿಸಿದರೆ ಧ್ಯಾನವು ಮನದ ಚಿಂತೆ, ಗೊಂದಲ, ನಿರಾಶೆ, ಸಂಕಟ, ನೋವುಗಳ ಕೊಳೆಯನ್ನು ನಿವಾರಿಸುತ್ತದೆ. ಧ್ಯಾನ ಒಂದು ಮುನಿದ ಪ್ರೇಯಸಿಯಂತೆ. ಪ್ರತಿ ಬಾರಿಯೂ ನಾವೇ ಮುಂದಾಗಿ ರಮಿಸಿ ಮನವೊಲಿಸಿ ನಂತರ ನಮ್ಮದಾಗಿಸಿಕೊಳ್ಳುವ ಅದ್ಭುತವಾದ ಕ್ರಿಯೆ.
ಧ್ಯಾನ ಮಾಡುವ ವಿಧಾನ….. ನಾವು ಕುಳಿತಿರುವ ಜಾಗದಲ್ಲಿಯೇ ನೆಲದ ಮೇಲೆ ಸಾಧ್ಯವಾದರೆ ಪದ್ಮಾಸನದಲ್ಲಿ ಇಲ್ಲವೇ ಹಾಗೆಯೇ ಚಕ್ಕಳ ಮಕ್ಕಳ ಹಾಕಿಕೊಂಡು ಕೂಡಬೇಕು. ಕಣ್ಣು ಸಂಪೂರ್ಣವಾಗಿ ಮುಚ್ಚಿದ್ದು ಮನವನ್ನು ಅತ್ತಿತ್ತ ಗಮಿಸದೆ ಏಕ ಚಿತ್ತದಲ್ಲಿ ನಿಲ್ಲುವಂತೆ ಒಂದೆಡೆ ಕೇಂದ್ರೀಕರಿಸಬೇಕು. ಉಸಿರನ್ನು ಕ್ರಮಬದ್ಧವಾಗಿ ಒಳಗೆ ತೆಗೆದುಕೊಳ್ಳುವುದು ಮತ್ತು ಹೊರ ಹಾಕುವುದನ್ನು ಮಾಡಬೇಕು. ಇದನ್ನು ಪ್ರಾಣಾಯಾಮದ ಭಾಷೆಯಲ್ಲಿ ಅನುಲೋಮ ವಿಲೋಮ ಎಂದು ಕರೆಯುತ್ತಾರೆ. ನಿಧಾನವಾಗಿ ಮೂಗಿನ ಹೊರಳೆಗಳು ಮೂಲಕ ದೀರ್ಘವಾಗಿ ಉಸಿರನ್ನು ಎದೆಯ ಭಾಗ ಉಬ್ಬುವಂತೆ ತುಂಬಿಕೊಳ್ಳುತ್ತಾ ತುಸು ಸಮಯ ಉಸಿರನ್ನು ಹಿಡಿದಿಟ್ಟುಕೊಂಡು ನಂತರ ಅಷ್ಟೇ ನಿಧಾನವಾಗಿ ಉಸಿರನ್ನು ಹೊರಹಾಕಬೇಕು. ಇದು ಮನಸ್ಸನ್ನು ಕೇಂದ್ರೀಕರಿಸಲು ಅತ್ಯಂತ ಸರಳವಾದ ಮತ್ತು ಸುಲಭವಾದ ಪ್ರಾಣಾಯಾಮ. ಈ ಪ್ರಾಣಾಯಾಮಗಳಲ್ಲಿ ಇನ್ನೂ ಹಲವು ವಿಧಗಳಿವೆ.
ಧ್ಯಾನದ ಆರಂಭದಲ್ಲಿ ಸುತ್ತಲಿನ ವಾತಾವರಣದಲ್ಲಿನ ಶಬ್ದಗಳು, ಮಾತುಕತೆಗಳು ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಲು ಸಾಧ್ಯವಾಗದೆ ಹೋಗುವಂತೆ ಮಾಡಿದರೂ ಸತತವಾಗಿ ಅಭ್ಯಸಿಸುತ್ತ ಹೋದಂತೆ ಧ್ಯಾನಸ್ಥ ಸ್ಥಿತಿ ನಮ್ಮದಾಗುತ್ತದೆ. ಮನಸ್ಸು ಅತ್ತಿತ್ತ ಅಲೆದಾಡುತ್ತಾ ಇದ್ದರೂ ಒಂದು ಹಂತಕ್ಕೆ ಬಂದಾಗ ಏಕಾಗ್ರಚಿತ್ತತೆ ಸಾಧಿಸಲಾರಂಭಿಸುತ್ತದೆ. ನಂತರ ಸಿಕ್ಕುವುದೇ ಆನಂದ… ಪರಮಾನಂದದ ಸ್ಥಿತಿಯಾದರೂ ಎಲ್ಲರಿಗೂ ಈ ಹಂತ ದಕ್ಕುವುದು ಕಷ್ಟ ಸಾಧ್ಯ.
ಇನ್ನೂ ಹಲವಾರು ಜನರಿಗೆ ಧ್ಯಾನದ ಆರಂಭದಲ್ಲಿ ಹಲವಾರು ದಿನಗಳ ಕಾಲ ಮನದಲ್ಲಿ ಮಡುಗಟ್ಟಿದ ದುಗುಡ ದುಮ್ಮಾನಗಳು ಅಸಹಾಯಕತೆ, ಕೋಪ, ತಾಪಗಳು ಬಿಕ್ಕಳಿಕೆ, ಕಣ್ಣೀರು ಮತ್ತು ಅಳುವಿನ ರೂಪದಲ್ಲಿ ಹೊರಹೊಮ್ಮಿ
ಮನಸ್ಸು ಸ್ವಚ್ಛ ಮತ್ತು ನಿರಾಳವಾಗುತ್ತದೆ.
ಧ್ಯಾನದ ಮೂಲಭೂತ ಅಂಶವೇ ಮನಸ್ಸಿನ ಶಾಂತಿ, ನೆಮ್ಮದಿ ಮತ್ತು ಸಮತೋಲನ ವಾಗಿರುವುದರಿಂದ ಧ್ಯಾನದ ಸಮಯದಲ್ಲಿ ನಮ್ಮ ಗಮನದಲ್ಲಿ ಇರಿಸಬಹುದಾದ ಹಲವು ವಿಷಯಗಳಿವೆ. …
*ಮನದಲ್ಲಿ ಉಂಟಾಗುವ ಆಲೋಚನೆಗಳಿಗೆ ತಡೆಯೊಡ್ಡಬಾರದು.
*ಧ್ಯಾನ ಮಾಡುವ ಮನಸ್ಥಿತಿಗೆ ನಮ್ಮ ಮನಸ್ಸನ್ನು ಒಪ್ಪಿಸುವುದು.
*ಅತಿಯಾದ ನಿರೀಕ್ಷೆ ಬೇಡ …. ಎಲ್ಲ ರೀತಿಯ ಗುಣ ಮತ್ತು ಅವಗುಣಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ.
*ಅಂತಿಮವಾಗಿ ತಪ್ಪು-ಒಪ್ಪು, ಆಸೆ ನಿರಾಸೆ ನೋವು ನಲಿವು ಎಲ್ಲವನ್ನು ಅದು ಇದ್ದಂತೆ ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಹೊಂದುತ್ತೇವೆ.
‘ಸುಖ ದುಃಖಃ ಸಮೇ ಕೃತ್ವ’ ಎನ್ನುವ ಭಗವದ್ಗೀತೆಯ ವಾಣಿಯಂತೆ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುವ ಅದ್ಭುತವನ್ನು ಧ್ಯಾನ ನಮ್ಮಲ್ಲಿ ಉಂಟುಮಾಡುತ್ತದೆ.
ಧ್ಯಾನ ಒಂದು ಅದ್ಭುತ ಕ್ರಿಯೆ… ಬದುಕಿನ ಯಾವುದೇ ಹಂತದಲ್ಲಿ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಧ್ಯಾನವನ್ನು ಅಳವಡಿಸಿಕೊಂಡರೆ ಅದು ನಮ್ಮಲ್ಲಿ ಏಕಾಗ್ರ ಚಿತ್ತತೆಯನ್ನು, ಪ್ರಶಾಂತತೆಯನ್ನು, ಸ್ವಾಧ್ಯಾಯವನ್ನು, ಪರಿಕಿಸಿ ನೋಡುವ ಶಕ್ತಿಯನ್ನು ನೀಡುತ್ತದೆ.
ಧ್ಯಾನದ ಈ ಶಕ್ತಿಯನ್ನು ಮನಗಂಡ ನಮ್ಮ ಹಿರಿಯರು ಧ್ಯಾನವನ್ನು ಜಪ ತಪಗಳ ಹೆಸರಿನಲ್ಲಿ ಆಧ್ಯಾತ್ಮಿಕ ಬದುಕಿನ ಭಾಗವನ್ನಾಗಿಸಿಕೊಂಡಿದ್ದರು.
ಧ್ಯಾನದ ಈ ಮಹತ್ವವನ್ನು ಮನಗಂಡ ವಿಶ್ವಸಂಸ್ಥೆಯು ಪ್ರಸಕ್ತ ವರ್ಷ 2024 ಡಿಸೆಂಬರ್ 21 ರ ದಿನವನ್ನು ವಿಶ್ವ ಧ್ಯಾನ ದಿನಾಚರಣೆ ಯಾಗಿ ಆಚರಿಸುತ್ತಿದ್ದು ಧ್ಯಾನ ಮಾನಸಿಕ ಶಾಂತಿ ಮತ್ತು ಆರೋಗ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಪ್ರಸ್ತುತ ವರ್ಷ” ಆಂತರಿಕ ಶಾಂತಿ ಮತ್ತು ವಿಶ್ವ ಸಾಮರಸ್ಯಕ್ಕಾಗಿ ಧ್ಯಾನ” ಎಂಬ ಧ್ಯೇಯ ವಾಕ್ಯವನ್ನು ಹೊಂದಿದ್ದು ಎಲ್ಲರೂ ಧ್ಯಾನವನ್ನು ಬದುಕಿನ ಭಾಗವನ್ನಾಗಿಸಿಕೊಳ್ಳಲು ವಿಶ್ವಸಂಸ್ಥೆಯು ಕರೆ ನೀಡಿದೆ.
ಬನ್ನಿ ಧ್ಯಾನವನ್ನು ಜೀವನದ ಭಾಗವಾಗಿಸಿಕೊಳ್ಳೋಣ.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
[3:36 pm, 21/12/2024] Veena hemanth Patil: ಓದಿನ ಮಹತ್ವ
ಪ್ರಾಚೀನ ಕಾಲದಿಂದಲೂ ಮನುಷ್ಯನ ಅತ್ಯುತ್ತಮ ಹವ್ಯಾಸಗಳಲ್ಲಿ ಒಂದಾಗಿರುವುದು ಪುಸ್ತಕದ ಓದು. ನಮ್ಮ ಬುದ್ಧಿಯ ತೃಷೆಗೆ ಅಮೃತದ ಸವಿಯನ್ನು ನೀಡುವ ಓದು ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸುತ್ತದೆ. ಹೊಸ ವಿಷಯಗಳ ಕುರಿತು ಅರಿವನ್ನು ಮೂಡಿಸುತ್ತದೆ.
ಜಗತ್ತಿನ ಸರ್ವ ಚರಾಚರಗಳಲ್ಲಿ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮನುಷ್ಯನಿಗೆ ಓದು ಮತ್ತು ಬರಹ ಎಂಬ ಎರಡು ಅಸ್ತ್ರಗಳಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡವರೇ ಧನ್ಯರು.
ಜ್ಞಾನವನ್ನು ಸಂಪಾದಿಸಲು ಓದು ಮುಖ್ಯ. ಭೂಗೋಳದಿಂದ ಖಗೋಳದವರೆಗೆ, ಪ್ರಾಚೀನ ಕಾಲದಿಂದ ಇಂದಿನವರೆಗೆ, ಉತ್ತರ ಧ್ರುವದಿಂದ ದಕ್ಷಿಣ ಧ್ರುವದವರೆಗೆ ಬದುಕಿನ ವಿವಿಧ ಹಂತಗಳಲ್ಲಿ ಜಾತಿ, ಮತ, ಲಿಂಗ, ವಯಸ್ಸುಗಳ ಭೇದವಿಲ್ಲದೆ
ಓದುವಿಕೆಯ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.
ಒಳ್ಳೆಯ ಓದು ನಮ್ಮ ಜಾಣ್ಮೆಯನ್ನು ಹೆಚ್ಚಿಸಿ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ. ಸಕಾರಾತ್ಮಕ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ತಪ್ಪು ಸರಿಗಳನ್ನು ಪರಿಕಿಸಿ ನೋಡುವ,ವಿವೇಚಿಸುವ ಶಕ್ತಿಯನ್ನು ಕೊಡುತ್ತದೆ.
ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಓದಿನಿಂದ ಸಂಪಾದಿಸಿದ ಜ್ಞಾನವು ಸಹಾಯಕ.
ಒಳ್ಳೆಯ ಓದು ನಿಮ್ಮನ್ನು ಉತ್ತಮ ಬರಹಗಾರರನ್ನಾಗಿ ರೂಪಿಸುತ್ತದೆ. ನಿಮ್ಮಲ್ಲಿ ಸೃಜನಶೀಲತೆಯನ್ನು ತುಂಬಿ ಮೇಧಾವಿಗಳನ್ನಾಗಿಸುತ್ತದೆ. ಬೇರೊಬ್ಬರ ಮನದ ಭಾವನೆಗಳನ್ನು ಓದಲು ಓದು ಸಹಾಯಕವಾಗುತ್ತದೆ. ಓದು ನಮ್ಮಲ್ಲಿ ಜ್ಞಾನವನ್ನು ಹೆಚ್ಚಿಸಿ ಸರಿ ತಪ್ಪುಗಳ ಒಳಿತು ಕೆಡುಕುಗಳ, ಮಹಾನತೆ ಮತ್ತು ಗಹನತೆಗಳ
ಚಿಂತನೆಗೊಳಪಡಿಸುತ್ತದೆ.
ಒಳ್ಳೆಯ ಓದು, ಚಿಂತೆಗಳನ್ನು ಮನದ ದುಗುಡಗಳನ್ನು ದೂರ ಮಾಡಿ ನಮ್ಮನ್ನು ಒತ್ತಡರಹಿತರನ್ನಾಗಿಸುತ್ತದೆ. ಮಾನಸಿಕ ಶಾಂತಿಯನ್ನು ನೀಡುತ್ತದೆ.
ನಮ್ಮ ಗುರಿಯನ್ನು ತಲುಪಲು ಓದು ಸಹಕಾರಿಯಾಗಿದ್ದು
ದಿನಾಚರಣೆ ಪ್ರಯುಕ್ತ )
ತಿನಿತ್ಯ ಧ್ಯಾನ ಮಾಡಬೇಕು ಧ್ಯಾನ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ವಿಶ್ರಾಂತಿ ದೊರೆಯುತ್ತದೆ. ದೇಹದ ದಣಿವಿಗೆ ವಿಶ್ರಾಂತಿ ಅಗತ್ಯವಿದ್ದಂತೆ ಮನಸ್ಸಿನ ಧಣಿವಿಗೆ ಧ್ಯಾನದ ಅಗತ್ಯವಿದೆ. ಒಬ್ಬ ವ್ಯಕ್ತಿಯು ತಾಂತ್ರಿಕವಾಗಿ ಶಕ್ತಿಯನ್ನು ಒಂದು ನಿರ್ದಿಷ್ಟ ವಸ್ತು, ಆಲೋಚನೆ ಇಲ್ಲವೇ ಚಟುವಟಿಕೆಯ ಮೇಲೆ ಕೇಂದ್ರೀಕರಿಸುವುದನ್ನು ಅಭ್ಯಸಿಸುವ ಏಕ ಮಾತ್ರ ವಿಧಾನ – ಗಮನ ಮತ್ತು ಜಾಗೃತಿಯನ್ನು ತರಬೇತಿ ಮಾಡಲು ಮತ್ತು ಮಾನಸಿಕವಾಗಿ ಸ್ಪಷ್ಟ ಮತ್ತು ಭಾವನಾತ್ಮಕವಾಗಿ ಶಾಂತ ಮತ್ತು ಸ್ಥಿರ ಸ್ಥಿತಿಯನ್ನು ಸಾಧಿಸಲು ಧ್ಯಾನ ಅತ್ಯವಶ್ಯಕ.
ಧ್ಯಾನವನ್ನು ಹಲವಾರು ಧಾರ್ಮಿಕ ಸಂಪ್ರದಾಯಗಳಲ್ಲಿ ಕೂಡ ಅಭ್ಯಾಸ ಮಾಡಲಾಗುತ್ತದೆ. ಜಪ, ತಪ, ಭಜನೆ, ಅನುಷ್ಠಾನ ಮೌನಾನುಸಂಧಾನ ಮತ್ತು ನಾದಾನುಸಂಧಾನಗಳು ಕೂಡ ಧ್ಯಾನದ ಇನ್ನುಳಿದ ಮಾದರಿಗಳು. ಇಷ್ಟಲಿಂಗ ಪೂಜೆಯಲ್ಲಿಯೂ ಕೂಡ ಕರತಲದಲ್ಲಿ ಲಿಂಗವನ್ನು ಇರಿಸಿ ಪೂಜಿಸಿ ನಂತರ ಲಿಂಗಾನು ಸಂಧಾನದ ಮೂಲಕ ಧ್ಯಾನವನ್ನು ಕೈಗೊಳ್ಳಲಾಗುತ್ತದೆ.
ಪ್ರಾಚೀನ ಕಾಲದಿಂದಲೂ ಧ್ಯಾನವನ್ನು ಭಾರತೀಯರು ಅಭ್ಯಸಿಸುತ್ತಾ ಬಂದಿದ್ದಾರೆ. ಸ್ನಾನವು ದೇಹದ ಕೊಳೆಯನ್ನು ನಿವಾರಿಸಿದರೆ ಧ್ಯಾನವು ಮನದ ಚಿಂತೆ, ಗೊಂದಲ, ನಿರಾಶೆ, ಸಂಕಟ, ನೋವುಗಳ ಕೊಳೆಯನ್ನು ನಿವಾರಿಸುತ್ತದೆ. ಧ್ಯಾನ ಒಂದು ಮುನಿದ ಪ್ರೇಯಸಿಯಂತೆ. ಪ್ರತಿ ಬಾರಿಯೂ ನಾವೇ ಮುಂದಾಗಿ ರಮಿಸಿ ಮನವೊಲಿಸಿ ನಂತರ ನಮ್ಮದಾಗಿಸಿಕೊಳ್ಳುವ ಅದ್ಭುತವಾದ ಕ್ರಿಯೆ.
ಧ್ಯಾನ ಮಾಡುವ ವಿಧಾನ….. ನಾವು ಕುಳಿತಿರುವ ಜಾಗದಲ್ಲಿಯೇ ನೆಲದ ಮೇಲೆ ಸಾಧ್ಯವಾದರೆ ಪದ್ಮಾಸನದಲ್ಲಿ ಇಲ್ಲವೇ ಹಾಗೆಯೇ ಚಕ್ಕಳ ಮಕ್ಕಳ ಹಾಕಿಕೊಂಡು ಕೂಡಬೇಕು. ಕಣ್ಣು ಸಂಪೂರ್ಣವಾಗಿ ಮುಚ್ಚಿದ್ದು ಮನವನ್ನು ಅತ್ತಿತ್ತ ಗಮಿಸದೆ ಏಕ ಚಿತ್ತದಲ್ಲಿ ನಿಲ್ಲುವಂತೆ ಒಂದೆಡೆ ಕೇಂದ್ರೀಕರಿಸಬೇಕು. ಉಸಿರನ್ನು ಕ್ರಮಬದ್ಧವಾಗಿ ಒಳಗೆ ತೆಗೆದುಕೊಳ್ಳುವುದು ಮತ್ತು ಹೊರ ಹಾಕುವುದನ್ನು ಮಾಡಬೇಕು. ಇದನ್ನು ಪ್ರಾಣಾಯಾಮದ ಭಾಷೆಯಲ್ಲಿ ಅನುಲೋಮ ವಿಲೋಮ ಎಂದು ಕರೆಯುತ್ತಾರೆ. ನಿಧಾನವಾಗಿ ಮೂಗಿನ ಹೊರಳೆಗಳು ಮೂಲಕ ದೀರ್ಘವಾಗಿ ಉಸಿರನ್ನು ಎದೆಯ ಭಾಗ ಉಬ್ಬುವಂತೆ ತುಂಬಿಕೊಳ್ಳುತ್ತಾ ತುಸು ಸಮಯ ಉಸಿರನ್ನು ಹಿಡಿದಿಟ್ಟುಕೊಂಡು ನಂತರ ಅಷ್ಟೇ ನಿಧಾನವಾಗಿ ಉಸಿರನ್ನು ಹೊರಹಾಕಬೇಕು. ಇದು ಮನಸ್ಸನ್ನು ಕೇಂದ್ರೀಕರಿಸಲು ಅತ್ಯಂತ ಸರಳವಾದ ಮತ್ತು ಸುಲಭವಾದ ಪ್ರಾಣಾಯಾಮ. ಈ ಪ್ರಾಣಾಯಾಮಗಳಲ್ಲಿ ಇನ್ನೂ ಹಲವು ವಿಧಗಳಿವೆ.
ಧ್ಯಾನದ ಆರಂಭದಲ್ಲಿ ಸುತ್ತಲಿನ ವಾತಾವರಣದಲ್ಲಿನ ಶಬ್ದಗಳು, ಮಾತುಕತೆಗಳು ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಲು ಸಾಧ್ಯವಾಗದೆ ಹೋಗುವಂತೆ ಮಾಡಿದರೂ ಸತತವಾಗಿ ಅಭ್ಯಸಿಸುತ್ತ ಹೋದಂತೆ ಧ್ಯಾನಸ್ಥ ಸ್ಥಿತಿ ನಮ್ಮದಾಗುತ್ತದೆ. ಮನಸ್ಸು ಅತ್ತಿತ್ತ ಅಲೆದಾಡುತ್ತಾ ಇದ್ದರೂ ಒಂದು ಹಂತಕ್ಕೆ ಬಂದಾಗ ಏಕಾಗ್ರಚಿತ್ತತೆ ಸಾಧಿಸಲಾರಂಭಿಸುತ್ತದೆ. ನಂತರ ಸಿಕ್ಕುವುದೇ ಆನಂದ… ಪರಮಾನಂದದ ಸ್ಥಿತಿಯಾದರೂ ಎಲ್ಲರಿಗೂ ಈ ಹಂತ ದಕ್ಕುವುದು ಕಷ್ಟ ಸಾಧ್ಯ.
ಇನ್ನೂ ಹಲವಾರು ಜನರಿಗೆ ಧ್ಯಾನದ ಆರಂಭದಲ್ಲಿ ಹಲವಾರು ದಿನಗಳ ಕಾಲ ಮನದಲ್ಲಿ ಮಡುಗಟ್ಟಿದ ದುಗುಡ ದುಮ್ಮಾನಗಳು ಅಸಹಾಯಕತೆ, ಕೋಪ, ತಾಪಗಳು ಬಿಕ್ಕಳಿಕೆ, ಕಣ್ಣೀರು ಮತ್ತು ಅಳುವಿನ ರೂಪದಲ್ಲಿ ಹೊರಹೊಮ್ಮಿ
ಮನಸ್ಸು ಸ್ವಚ್ಛ ಮತ್ತು ನಿರಾಳವಾಗುತ್ತದೆ.
ಧ್ಯಾನದ ಮೂಲಭೂತ ಅಂಶವೇ ಮನಸ್ಸಿನ ಶಾಂತಿ, ನೆಮ್ಮದಿ ಮತ್ತು ಸಮತೋಲನ ವಾಗಿರುವುದರಿಂದ ಧ್ಯಾನದ ಸಮಯದಲ್ಲಿ ನಮ್ಮ ಗಮನದಲ್ಲಿ ಇರಿಸಬಹುದಾದ ಹಲವು ವಿಷಯಗಳಿವೆ. …
*ಮನದಲ್ಲಿ ಉಂಟಾಗುವ ಆಲೋಚನೆಗಳಿಗೆ ತಡೆಯೊಡ್ಡಬಾರದು.
*ಧ್ಯಾನ ಮಾಡುವ ಮನಸ್ಥಿತಿಗೆ ನಮ್ಮ ಮನಸ್ಸನ್ನು ಒಪ್ಪಿಸುವುದು.
*ಅತಿಯಾದ ನಿರೀಕ್ಷೆ ಬೇಡ …. ಎಲ್ಲ ರೀತಿಯ ಗುಣ ಮತ್ತು ಅವಗುಣಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ.
*ಅಂತಿಮವಾಗಿ ತಪ್ಪು-ಒಪ್ಪು, ಆಸೆ ನಿರಾಸೆ ನೋವು ನಲಿವು ಎಲ್ಲವನ್ನು ಅದು ಇದ್ದಂತೆ ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಹೊಂದುತ್ತೇವೆ.
‘ಸುಖ ದುಃಖಃ ಸಮೇ ಕೃತ್ವ’ ಎನ್ನುವ ಭಗವದ್ಗೀತೆಯ ವಾಣಿಯಂತೆ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುವ ಅದ್ಭುತವನ್ನು ಧ್ಯಾನ ನಮ್ಮಲ್ಲಿ ಉಂಟುಮಾಡುತ್ತದೆ.
ಧ್ಯಾನ ಒಂದು ಅದ್ಭುತ ಕ್ರಿಯೆ… ಬದುಕಿನ ಯಾವುದೇ ಹಂತದಲ್ಲಿ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಧ್ಯಾನವನ್ನು ಅಳವಡಿಸಿಕೊಂಡರೆ ಅದು ನಮ್ಮಲ್ಲಿ ಏಕಾಗ್ರ ಚಿತ್ತತೆಯನ್ನು, ಪ್ರಶಾಂತತೆಯನ್ನು, ಸ್ವಾಧ್ಯಾಯವನ್ನು, ಪರಿಕಿಸಿ ನೋಡುವ ಶಕ್ತಿಯನ್ನು ನೀಡುತ್ತದೆ.
ಧ್ಯಾನದ ಈ ಶಕ್ತಿಯನ್ನು ಮನಗಂಡ ನಮ್ಮ ಹಿರಿಯರು ಧ್ಯಾನವನ್ನು ಜಪ ತಪಗಳ ಹೆಸರಿನಲ್ಲಿ ಆಧ್ಯಾತ್ಮಿಕ ಬದುಕಿನ ಭಾಗವನ್ನಾಗಿಸಿಕೊಂಡಿದ್ದರು.
ಧ್ಯಾನದ ಈ ಮಹತ್ವವನ್ನು ಮನಗಂಡ ವಿಶ್ವಸಂಸ್ಥೆಯು ಪ್ರಸಕ್ತ ವರ್ಷ 2024 ಡಿಸೆಂಬರ್ 21 ರ ದಿನವನ್ನು ವಿಶ್ವ ಧ್ಯಾನ ದಿನಾಚರಣೆ ಯಾಗಿ ಆಚರಿಸುತ್ತಿದ್ದು ಧ್ಯಾನ ಮಾನಸಿಕ ಶಾಂತಿ ಮತ್ತು ಆರೋಗ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಪ್ರಸ್ತುತ ವರ್ಷ” ಆಂತರಿಕ ಶಾಂತಿ ಮತ್ತು ವಿಶ್ವ ಸಾಮರಸ್ಯಕ್ಕಾಗಿ ಧ್ಯಾನ” ಎಂಬ ಧ್ಯೇಯ ವಾಕ್ಯವನ್ನು ಹೊಂದಿದ್ದು ಎಲ್ಲರೂ ಧ್ಯಾನವನ್ನು ಬದುಕಿನ ಭಾಗವನ್ನಾಗಿಸಿಕೊಳ್ಳಲು ವಿಶ್ವಸಂಸ್ಥೆಯು ಕರೆ ನೀಡಿದೆ.
ಬನ್ನಿ ಧ್ಯಾನವನ್ನು ಜೀವನದ ಭಾಗವಾಗಿಸಿಕೊಳ್ಳೋಣ.
ವೀಣಾ ಹೇಮಂತ್ ಗೌಡಪಾಟೀಲ್
ಉತ್ತಮ ಮತ್ತು ಮಾಹಿತಿಪೂರ್ಣ ಸಕಾಲಿಕ ಲೇಖನ