ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ʼಹಂಚಿಕೊಂಡೆವುʼ
ಹೂವು ದಳದ
ಭಾವ ಪರಿಮಳ
ಸ್ನೇಹ ಪ್ರೀತಿಯ
ಸಾಕ್ಷಿ ನೀನು
ಕಡಲ ಅಲೆಯ
ತೆರೆಯ ಮೇಲಿನ
ಹರಿವ ಶಕ್ತಿ
ಸ್ಫೂರ್ತಿ ನೀನು
ದಟ್ಟ ಕಾಡಿನ
ಮರದ ಪೊದರಿನ
ಪುಟ್ಟ ಹಕ್ಕಿಯ
ಧ್ವನಿಯು ನೀನು
ಒಲವ ಯಾತ್ರೆ
ನಲುಮೆ ಜೀವದ
ಕರಳು ಕುಡಿಯ
ಭಾಷೆ ನೀನು
ಎಲ್ಲೋ ಇದ್ದೆವು
ನಾನು ನೀನು
ಕೂಡಿ ನಡೆಯುವ
ಪಯಣವು
ನನಗೆ ನೀನು
ನಿನಗೆ ನಾನು
ಹಂಚಿಕೊಂಡೆವು
ಪ್ರೇಮವು
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಹಂಚಿಕೊಂಡ ಸ್ನೇಹ -ಪ್ರೀತಿಯೇ ಶಕ್ತಿ -ಸ್ಫೂರ್ಥಿ ಯಾಗಿ ಹೊರಹೊಮ್ಮುತ್ತದೆ ಎನ್ನುವ ಕವನದ
ಸಂದೇಶ ಸುಂದರವಾಗಿ ಒಡಮೂಡಿದೆ
ಸುಶಿ
ತುಂಬಾ ಸುಂದರ ಭಾವಪೂರ್ಣ ಕವನ ಸರ್, ನಿಮ್ಮವಳೊಂದಿಗೆ ಹಂಚಿಕೊಂಡ ನಿಮ್ಮ ಪ್ರೀತಿ ಇಮ್ಮಡಿಗೊಳ್ಳಲಿ,
ಅರ್ಥ ಪೂರ್ಣ ಭಾವ ಗೀತೆ
ಎಷ್ಟು ಸುಂದರ ನೆನಪು
Nice dedication to loved one