ಪೆಪ್ಸಿಕೋ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸಿದ ಜಾಗತಿಕವಾಗಿ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟ  ಇಂದ್ರಾ ನೂಯಿ ಅವರ ಬಾಲ್ಯ ಜೀವನದ ಕುರಿತು ಹೀಗೆ ಹೇಳಿಕೊಂಡಿದ್ದಾರೆ.
 ಅಂದಿನ ಕಾಲದಲ್ಲಿಯೇ ಅತ್ಯುನ್ನತ ವಿಚಾರಧಾರೆಗಳನ್ನು ಹೊಂದಿದ ಕುಟುಂಬ ನನ್ನದಾಗಿತ್ತು. ಹೆಣ್ಣು ಮಕ್ಕಳ ಶಿಕ್ಷಣದ ವಿಷಯದಲ್ಲಂತೂ ಆಧುನಿಕ ಮನಸ್ಥಿತಿಯನ್ನು ನನ್ನ ಪಾಲಕರು ಹೊಂದಿದ್ದರು. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ನಾನು ನನ್ನ ತಂದೆ ತಾಯಿಗೆ ಮಧ್ಯದ ಮಗಳಾಗಿದ್ದೆ ಕೂಡ. ಕುಸು ಕಪ್ಪೇ ಎನಿಸುವ ಬಣ್ಣ,ಎತ್ತರವಾದ ಕೃಶ ಕಾಯದ, ಸಾಕಷ್ಟು ಚೈತನ್ಯವನ್ನು ಹೊಂದಿದ ಹೆಣ್ಣು ಮಗಳು ನಾನಾಗಿದ್ದೆ. ಗಂಡು ಮಕ್ಕಳಂತೆ ಮನೆಯ ಆಸು ಪಾಸಿನಲ್ಲಿರುವ ಮರವನ್ನು ಏರಿ ಆಟವಾಡುವ, ತೋಪುಗಳಿಗೆ ಲಗ್ಗೆ ಇಟ್ಟು ಮರದಿಂದ ಕಾಯಿ ಕೀಳುವ ನಾನು ಗಂಡುಬೀರಿ ಎನಿಸಿಕೊಂಡಿದ್ದೆ. ಚರ್ಮದ ಬಣ್ಣ, ಸೌಂದರ್ಯ, ಶಾಂತ ಸ್ವಭಾವ ಮತ್ತು ಮುಗ್ಧತೆಗಳ ಮೇಲೆ ನಮ್ಮ ಬದುಕಿನ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಸಂಬಂಧಿಕರ ನಡುವೆ ನಾನು ಬಹುತೇಕ ಚರ್ಚೆಯ ವಿಷಯವಾಗಿದ್ದು ಇಂತಹ ಗಂಡು ಬೀರಿಯನ್ನು ಅದಾರು ಮದುವೆಯಾಗುತ್ತಾರೆ ಎಂದು ಅವರೆಲ್ಲರೂ ಯೋಚಿಸುತ್ತಿದ್ದರು.

 ಆದರೆ ಇದಾವುದೂ ನನ್ನ ಮೇಲೆ ಪರಿಣಾಮ ಬೀರಲಿಲ್ಲ. ಓರ್ವ ಹುಡುಗಿಯಾಗಿ ಕಲಿಯುವ ಅವಕಾಶ ದೊರೆತದ್ದೇ  ಹೆಚ್ಚು ಎಂಬಂತಹ ಪರಿಸ್ಥಿತಿ ನನ್ನದು. ಮಧ್ಯದ ಮಗಳಾಗಿದ್ದ ನಾನು ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಓದಿದೆ. ನಮ್ಮ ಮನೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು ಎಂಬ ಭೇದವಿಲ್ಲದೆ ಸಮಾನ ಭಾವದಲ್ಲಿ ನಮ್ಮನ್ನು  
 ಕಾಣಲಾಗುತ್ತಿತ್ತು. ಸಾಮಾನ್ಯವಾಗಿ ಗಂಡು ಹುಡುಗರಂತಲ್ಲದೇ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಬೆಳೆಸಬೇಕು ಎಂಬ ಭಾವದಿಂದ ಹೊರತಾಗಿ ನಾವು ಬೆಳೆದವು. ಯಾವುದೇ ರೀತಿಯ ತಾರತಮ್ವಿಲ್ಲದೆ ನಾನು ನನ್ನ ಜಾಣ್ಮೆಯಿಂದ ನನಗೆ ದೊರೆತ ಅವಕಾಶಗಳನ್ನು ಬಳಸಿಕೊಂಡೆ.

 ನನ್ನ ತಂದೆ ವಿಶಾಲ ಮನೋಭಾವದವರಾಗಿದ್ದು
 ಜೀವನದ ಎಲ್ಲ ಬಗೆಯ ಪಾಠಗಳನ್ನು ನಮಗೆ ಹೇಳಿಕೊಟ್ಟರು. ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸಿ ಗೆಲ್ಲಬೇಕೆಂಬ ಛಲವನ್ನು ನಮ್ಮಲ್ಲಿ ಮೂಡಿಸಲು ಶಕ್ತರಾದವರು ನನ್ನಪ್ಪ. ನಾವೆಂದೂ ನಮ್ಮ ಪಾಲಕರ ಹೊರತಾಗಿ ಬೇರೊಬ್ಬರ ಮುಂದೆ ಕೈ ಚಾಚದಂತಹ ಬದುಕನ್ನು ನನ್ನಪ್ಪ ನಮಗೆ ನೀಡಿದ್ದರು .ನಾವು ನಿಮಗಾಗಿ ಆಸ್ತಿಯನ್ನು ಮಾಡುತ್ತಿಲ್ಲ. ನಾವು ನಿಮಗೆ ಶಿಕ್ಷಣವನ್ನು ನೀಡುವ ಮೂಲಕ ನಿಮ್ಮ ಕಾಲುಗಳ ಮೇಲೆ ನೀವು ನಿಂತುಕೊಳ್ಳಲು ಸಹಾಯ ಮಾಡುತ್ತೇವೆ ಮುಂದಿನದ್ದು ನಿಮಗೆ ಬಿಟ್ಟದ್ದು. ನಿಮ್ಮ ಬದುಕಿನ ದಾರಿಯನ್ನು ನೀವೇ ತೀರ್ಮಾನಿಸಿಕೊಳ್ಳಬೇಕು ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು.

 ನನ್ನ ತಾಯಿಯ ಅಭಿಪ್ರಾಯ ಕೂಡ ಅದೇ ಆಗಿತ್ತು.
 ಕುಟುಂಬದ ಎಲ್ಲ ಸಂಕಷ್ಟಗಳಿಗೆ, ತೊಂದರೆಗಳಿಗೆ ಸೊಸೆಯಂದಿರನ್ನೇ ಕೈಮಾಡಿ ತೋರಿಸುತ್ತಿದ್ದ ಅಂದಿನ ಕಾಲದ ಗಟ್ಟಿಗಿತ್ತಿ ಸೊಸೆಯರಂತೆ ನನ್ನಮ್ಮ ಬದುಕಿನಲ್ಲಿ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಳು. ನಾವು ಇಂದಿನ ಸಿಇಓಗಳು ವೃತ್ತಿ ಪರವಾಗಿ ನಿರ್ವಹಿಸುವ ಕಾರ್ಯಗಳನ್ನು ನನ್ನಮ್ಮ ಅಂದಿನ ದಿನಗಳಲ್ಲಿ ಯಾವುದೇ ಕಾಲೇಜು ಮೆಟ್ಟಿಲು ಹತ್ತದೇ ವೃತ್ತಿಪರ ತರಬೇತಿ ಪಡೆಯದೇ ಇದ್ದರೂ ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದಳು. ತಾನು ಪಡುತ್ತಿರುವ ಯಾವುದೇ ಸಂಕಷ್ಟಗಳ ಗಾಳಿ ತನ್ನ ಮಕ್ಕಳಿಗೆ ಸೋಕಬಾರದು ಎಂಬಷ್ಟು ಗಟ್ಟಿಗಿತ್ತಿಯರನ್ನಾಗಿ ತನ್ನ ಮಕ್ಕಳನ್ನು ಬೆಳೆಸುವ ನಿಟ್ಟಿನಲ್ಲಿ ಆಕೆ ಕೊಂಚ ಹೆಚ್ಛೇ ಶಿಸ್ತಿನ ಬದುಕಿಗೆ ನಮ್ಮನ್ನು ಒಳಪಡಿಸಿದ್ದಳು. ತಾನು ಕಂಡ ಕನಸಿನ ಬದುಕನ್ನು ತನ್ನ ಮಕ್ಕಳಲ್ಲಿ ಸಾಕಾರಗೊಳಿಸಿಕೊಳ್ಳಲು  ನನ್ನಮ್ಮ ಬಯಸಿದ್ದಳು. ಬದುಕಿನಲ್ಲಿ ಆಕೆ ಎಂದೂ ಕಾಣದ ಸ್ವಾತಂತ್ರ್ಯವನ್ನು ತನ್ನ ಮಕ್ಕಳಾದರೂ ಅನುಭವಿಸಲಿ ಎಂಬ ಆಶಯ ಆಕೆಯದಾಗಿತ್ತು.

 ಪ್ರತಿದಿನ ರಾತ್ರಿ ಊಟದ ಸಮಯದಲ್ಲಿ ಮೇಜಿನ ಮೇಲೆ ಕೆಲವು ಚೀಟಿಗಳಲ್ಲಿ ವಿಷಯಗಳನ್ನು ಬರೆದು ನನ್ನಮ್ಮ ಹಾಕಿರುತ್ತಿದ್ದಳು. ಪಾಳಿಯ ಪ್ರಕಾರ ನಾವು  ಒಡಹುಟ್ಟಿದವರಲ್ಲಿ ಒಬ್ಬರು ಆ ಚೀಟಿಯನ್ನು ಎತ್ತಿ
ಅದರಲ್ಲಿದ್ದ ವಿಷಯದ ಕುರಿತು ಐದು ನಿಮಿಷ ಮಾತನಾಡಬೇಕಿತ್ತು. ಇದು ನಮ್ಮಲ್ಲಿ ನಾವು ಮುಂದೆ ಏನಾಗಬೇಕು ಎಂಬುದರ ಕುರಿತ ಗುರಿಯನ್ನು ಹೊಂದಲು ದಾರಿ ದೀಪವಾಗಿತ್ತು.

 ನೋಡಿದಿರಾ ಸ್ನೇಹಿತರೆ, ಅತ್ಯಂತ ಯಶಸ್ವಿ ವ್ಯಕ್ತಿಗಳ ಹಿಂದಿನ ಬದುಕಿನಲ್ಲಿ ನೂರಾರು ಸಂಕಷ್ಟಗಳನ್ನು ಮೆಟ್ಟಿ ನಿಂತ ಕಥನಗಳಿವೆ. ಯಶಸ್ಸಿನ ಹಾದಿಯನ್ನು ಕ್ರಮಿಸಲು ಅವರು  ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿಲ್ಲ. ಬೆಳ್ಳಿಯ ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ಬಂದವರಲ್ಲ…. ತಮ್ಮ ಬದುಕಿನ ಪ್ರತಿ ಸಂಕಷ್ಟಗಳನ್ನು ಛಲದಿಂದ ಎದುರಿಸಿ ಅವುಗಳನ್ನೇ ತಮ್ಮ ಯಶಸ್ಸಿನ ಹಾದಿಯ  ಮೆಟ್ಟಿಲನ್ನಾಗಿಸಿಕೊಂಡು ಗುರಿ ತಲುಪಿದ್ದಾರೆ.ಪ್ರಯತ್ನ ಪಡೆದ ಹೊರತು ಯಾವ ಗುರಿಯೂ ಯಶಸ್ವಿಯಾಗುವುದಿಲ್ಲ.

 ಸ್ವಾಮಿ ವಿವೇಕಾನಂದರ ‘ಏಳು ಎದ್ದೇಳು ಗುರಿ ಮುಟ್ಟುವ ತನಕ ನಿಲ್ಲದಿರು’ ಎಂಬ ಮಾತನ್ನು ನಮ್ಮ ಬದುಕಿನ ಮಂತ್ರವಾಗಿಸಿಕೊಂಡು ನಿರಂತರ ಪ್ರಯತ್ನದ ಮೂಲಕ ಗುರಿಯನ್ನು ತಲುಪೋಣ ಎಂಬ ಆಶಯದೊಂದಿಗೆ


Leave a Reply

Back To Top