ಕಾವ್ಯ ಸಂಗಾತಿ
ಸುವರ್ಣ ಕುಂಬಾರ
ʼನಾ ನಿನ್ನವನು ನೀ ನನ್ನವಳುʼ
ಹಾರುವ
ಗಾಳಿಪಟದಂತಿತ್ತು
ನನ್ನ ಗುಣ
ಕತ್ತರಿಸಿ ನಗುವಂತಿತ್ತು
ನಿನ್ನ ಗುಣ
ಅರಳುವಾ ಗುಲಾಬಿಯಾ
ನಾಚಿಸುವಂತಿತ್ತು
ನನ್ನ ಗುಣ
ಹೊಸಕಿ ಹಾಕಿ
ಅಣಕಿಸುವಂತಿತ್ತು
ನಿನ್ನ ಗುಣ
ಬಳಲಿ ಬಂದವರಾ
ಸಾಕುವಂತಿತ್ತು
ನನ್ನ ಗುಣ
ಸ್ಮಶಾನ ಭೈರವನಾ
ಸಾರದಂತಿತ್ತು
ನಿನ್ನ ಗುಣ
ಪ್ರೀತಿಯ ಸವಿ ಜೇನು
ಉಣಿಸಲು ಹಂಬಲಿಸುತ್ತಿತು
ನನ್ನ ಮನ
ಪ್ರೀತಿ ಪ್ರೇಮದ
ಪುರದಿಂದ ದೂರವಿತ್ತು
ನಿನ್ನ ಗುಣ
ಬೇಡಿ ಬಂದೆನಾ ನಿನ್ನ
ಒಲವಧಾರೆಯ
ಬೆಳಸಿ ಬಳಸಿ ಬಾಳೋಣ
ಎನ್ನುವುದು
ನನ್ನ ಗುಣ
ಬಂದೆಯಾ ಬಾಳಿಗೆ ನೀ
ಇರು ಸುಮ್ಮನೆ ಎನ್ನುವ
ಪರಿಯಲ್ಲಿತು ನಿನ್ನ ಗುಣ
ನಾನ್ನಿನವವನ್ನು
ನೀನನ್ನವಳು ಎನ್ನುವುದೆ
ಆಗಿದೆ ಇಂದು
ನಮ್ಮ ಮನದ ಗುಣ
ಜನ್ಮದ ಧನ್ಯತೆ ಆಗಿತ್ತಿಂದು
ನಮ್ಮಿಬ್ಬರ ಒಲವ ಋಣ
ಸುವರ್ಣ ಕುಂಬಾರ