ಸವಿತಾ ದೇಶಮುಖ‌ ಅವರ ವಿಡಂಬನಾ ಕವಿತೆ-ಅಧಿವೇಶನ

ಅಧಿವೇಶನವಿದು- ಅಧಿಕರ ಸೋತ್ತು
ಮಾತು -ವಾಗ್ದಾನಗಳ ಜಗತ್ತು,!
ತಮ್ಮತನ ಮೆರೆವ ಗತ್ತು….
ವೇಷಧಾರಿಯರ ಗುರತು!

ಮಾತಿಗೆ ಮಾತಿನ ಹುರುಳು!
ಇರದು ಹೊಂದಾಣಿಕೆಯ ತಿರುಳು!
ಅರ್ಥವಿರದ ತಿರುವಿನ ತಿರಲು!
ನೋಡಲಾಗದ ಅಧಿಕರ ಕೂಟವದು..

ವಾದ- ಅಪವಾದಗಳ ವಿಪತ್ತು !
ಬಿಡಿಸಲಾಗದ-ಸಹಿಸದ ಕುತ್ತು !
ವೈರಿ -ಪಕ್ಷಗಳ ತೊತ್ತು!
ಮರೆ ಮಾಚಲಾಗದ ಗಮ್ಮತ್ತು….

ಹೊರಗೊಂದು ಒಳಗೊಂದು!
ಗೊಂದಲದ ಕೂಟವಿದು!
ಸತ್ಯವೇ ನಸುನಾಚಿ ಕೊಳ್ಳುವುದು !
ಆಶ್ವಾಸನೆ -ವಾಗ್ದಾನಗಳ ಮೇಳವದು …..

ಒಬ್ಬರ ಮೇಲೊಬ್ಬರು
ಹುಗಿ-ಮುಗಿ ಬೀಳುವರು!
ಹರಿದು-ಹಾಯ್ಯುವರು!
ಕೈ ಮೈ ಹೊಡೆದಾಟ, ಅಧಿಕತನವದು..

ಅಧಿವೇಶನದ ಒಳಾಂಗಣದಲ್ಲಿ
ಎದುರಾಳಿಗಳು ಇವರು-ಅಲ್ಲಿ!
ಹೊರಹೊಮ್ಮಿದರೆ ಸ್ನೇಹಿತರಿವರು!
ಹೆಗಲೊಡ್ಡಿ ತಿರುವುವರಲ್ಲಿ…..

ಅಧಿವೇಶನವಿದು – ಅಧಿಕ ಮತೀಯರ
ಆಟದ ಅಂಗಳವಿದು……..


Leave a Reply

Back To Top