ಮತ್ತೆ ಚಿಗುರಿತು ಕನಸು-
ಸವಿತಾರವರ ಕವಿತೆ
ನಿರಾಶೆಯ ಕೋಪದ
ಕೋಪಕ್ಕೆ ಇಳಿದು
ಮುಗಿ ಬಿದ್ದ ದಿನವದು
ಬಂದೇ ನೀ ದೀವಿಗೆಯಾಗಿ ಎಂದು…..
ಆಶೆಯ ಸಿರಿಯಾಗಿ
ದಿವ್ಯತೆ ಒಂದು ಕಿರಣಾಗಿ
ಬಂದೆ ಉಗಮವಾಗಿ
ನೆಲೆ ನಿಂತೆ ಮನದಾಳದಲ್ಲಿ ಎಂದು….
ಚಿವುಟಿ ಬೆಳೆವ ಚಿಗುರದು
ಘಾಸಿಗೊಳ್ಳಿಸಿದರಂದು
ಅದಾವುದು ಅರಿಯದು
ಮರಳಿ ಚಿಗುರಿತು ಕನಸು ಎಂದು….
ಹೆಮ್ಮರವಾಗುವ ಆತುರ
ಹೂ ಹಣ್ಣು ಫಲಿಸುವ ಕಾತುರ
ಉಮ್ಮಸ್ಸಿನಲ್ಲಿ ಎತ್ತಿ ತಲೆ ಎತ್ತಿ
ನಿಂತೆ ಸಣ್ಣಗೆ ಚಿಗುರೊಡೆಯಿತಿ ಎಂದು..
ಸಕಲ ಪಡಿಯನು ದಾಟಿ
ದೂರ ದೂರ ಸಾಗಿ
ಮುಂದೆ ನೋಡುವ
ಆಶಯ ಹೊತ್ತು ಬಂದೆ ಅಂದು….
ಮತ್ತೆ ನುಲಿದು ಬೆಳೆದು
ಹೆಮ್ಮೆಮರವಾಗುವೆ
ಫಲಿಸುವೆನೆಂದು… ಕನಸು ನನಸಾಗುವದೆಂದು
ಸವಿತಾ ದೇಶಮುಖ್