ಮಧುಮಾಲತಿರುದ್ರೇಶ್ಅವರ ಕವಿತೆ “ಸಾಧನೆʼʼ

ಕನಸು ಕಣ್ಣಿಗೆ ಬಡತನ ಅಡ್ಡಿಯಾಗದು
ಸಾಧಿಸುವ ಛಲವಿರೆ ಜಯವು ನಿನ್ನದು

ಸಾಧಕರ ಜೀವನವೇ ಕಣ್ಣ ಮುಂದಿಹುದು
ವಿಜಯಮಾಲೆ ಕೈ ಬೀಸಿ ಕರೆಯುತಿಹುದು

ವಿದ್ಯೆಯೆಂದಿಗೂ ಛಲಗಾರನಿಗೆ ಒಲಿವುದು
ಆಲಸಿಯ ಅರಮನೆಯಲಿ ಜ್ಞಾನ ನಿಲ್ಲಲಾರದದು

ಜ್ಞಾನವು ಬಡತನ ಸಿರಿತನವನೆಂದು ನೋಡದು
ವಿನಯಶೀಲನಿಗೆ ಶಾರದೆಯ ಕೃಪೆಯಿಹುದು

ಸಾಧನೆಯ ಹಾದಿಗೆ ಕಲ್ಲು ಮುಳ್ಳು ಸಹಜವದು
ಆತ್ಮವಿಶ್ವಾಸವಿರಲು ಗುರಿ ಸುಗಮವದು

ಕನಸು ಕನ್ನಡಿಯ ಗಂಟಾಗಬಾರದು
ನನಸಾಗಲು ಪರಿಶ್ರಮವನೆಂದು ಬಿಡಬಾರದು


3 thoughts on “ಮಧುಮಾಲತಿರುದ್ರೇಶ್ಅವರ ಕವಿತೆ “ಸಾಧನೆʼʼ

Leave a Reply

Back To Top