ಕಾವ್ಯ ಸಂಗಾತಿ
ಗಂಗಾಧರ ಅವಟೇರ.ಮಹಾದೇವ ಇಟಗಿ
ನೀ…ನನ್ನಾಕಿ
ಕಷ್ಟಗಳಿಗಳಿಗೆ ಕಳವಳ ಪಡಲಿಲ್ಲ
ಸುಖಗಳು ಗುಳೇ ಕಿತ್ತಿ ಬಂದರೂ ಹಿಗ್ಗಲಿಲ್ಲ;
ನಸುನಗುತಾ ಬಾಳ ಬಂಡಿ ಎಳೆದಾಕಿ
ಕರುಳ ಬಳ್ಳಿ ಕತ್ತರಿಸಿ ಹೋದರು
ಮಾನಾಪಮಾನಕೆ ಬೆನ್ನು ಮಾಡದಾಕೆ
ಜಾನಕಿಯಂತೆ ಬಾಳಿಗೆ ಬೆಳಕಾಗಿ ಬಂದಾಕಿ.
ನಮ್ಮವರು ಆಡಿದ ಬಿರುನುಡಿಯನು
ಆಲಿಸಿದರೂ ,ಕಿವುಡಳಾಗಿ ದಾಂಪತ್ಯದಲಿ
ಪ್ರೀತಿ,ಒಲವು ತುಂಬಿ ಸಖಿಯಾಗಿ ಬಂದಾಕಿ.
ನೋವಿಗೂ ನಗುವ ತುಂಬಿದಾಕೆ
ದು;ಖಕೆ ಒಲವು ಬೆರೆಸಿ ನಲ್ಮೆಯ ತುಂಬಿದಾಕಿ
ಬದುಕಿಗೂ ಬಲದ ಛಲ ತುಂಬಿ ಬಂದಾಕಿ.
ಕಾಲು ಮುರಿದು ಕೋಲು ಹಿಡಿದು
ಅಸ್ಥಿರತೆಯಲೂ ಸ್ಥಿರತೆ ತುಂಬಿದಾಕೆ
ತಾಯಿಯಂತೆ ಮಮತೆಯ ತೋರಿದಾಕೆ.
ಗೆಳೆತನಕೆ ನಲ್ಲೆ ;ಕೈಹಿಡಿದು ಹೆಂಡತಿಯಾದೆ
ಸೇವೆಗೈದು ದಾಸಿಯಾದೆ.ಬಾಳಿನಲ್ಲಿ ವಾರಿದೆ.
ಶೃಂಗಾರ,ಹಾಸ್ಯ ,ಶಾಂತ ರಸಗವಳವಾಗಿ ಬಂದೆ.
ಜೀವನದಲಿ ಬೇಕು ಬೇಡಗಳ ಬೇಡಿಕೆ
ಹೇಳಿ,ಮನಸು ಘಾಸಿಗೊಳಿಸಿದಾಕೆ ಇವಳಲ್ಲ.
ಪ್ರೀತಿಯ ವರ್ಷಧಾರೆ ಸುರಿದವಳು ಇಕೆ.
ನೀ ನನ್ನಾಕಿ ಕೆಳದಿ.ನನ್ನ ಮನದ ಒಡತಿ.
ಗಂಗಾಧರ ಅವಟೇರ.ಮಹಾದೇವ ಇಟಗಿ