ಕಾವ್ಯ ಸಂಗಾತಿ
ಹೇಮಚಂದ್ರ ದಾಳಗೌಡನಹಳ್ಳಿ
ʼನಿವೇದನೆʼ
ನಿನ್ನನೇ ಬಯಸಿದ
ನನ್ನೊಳಗ ಬಯಕೆಗಳು
ಬಾಯಾರಿ ಬಿಕ್ಕುತಿವೆ
ನೀನೊಲವನೀರುಡಿಸು ಬಾ
ಚೇತನಗೊಳ್ಳಲಿ ಪ್ರೇಮಕೇತನ
ಹಗಲು ಇರುಳು
ನೆಳಲು ಬೆಳಕಿನ ಪರಿವೆಯಿಲ್ಲದೆ
ಬಯಲಲ್ಲಿ ಬಯಲಾಗಲು
ಭಯತೊರೆದು ಧರಣಿ ಕೂತಿವೆ
ನೀನೊಲವುಪಚಾರ ಮಾಡು ಬಾ
ಚೇತನಗೊಳ್ಳಲಿ ಪ್ರೇಮಕೇತನ
ಪ್ರೇಮಕಾಶ್ಮೀರ ನೆನೆದ
ಮನಸಮೀರ ಬೀಸಿ ಬರುತಿದೆ
ಕಾಣು
ಒಲವಸಾಗರರೂಪಿ ನೀ ತಂಗೊಳಿಸು
ಚೇತನಗೊಳ್ಳಲಿ ಪ್ರೇಮಕೇತನ
————-
ಹೇಮಚಂದ್ರ ದಾಳಗೌಡನಹಳ್ಳಿ