ಡಾ. ಮಹೇಂದ್ರ ಕುರ್ಡಿ ಅವರ ಕವಿತೆ-ಸಾರ್ಥಕ ಬದುಕು

ಎಷ್ಟು ದಿನ ಸವೆಸಿದರೇನು ?
ಅರ್ಥವಿಲ್ಲದ ಬದುಕು
ವ್ಯರ್ಥ ಸಮಯ ಕಳೆವ ಮುನ್ನ
ಅರ್ಥ ನೀಡು ನಿನ್ನ ಬಾಳಿಗೆ .

ಹೇಳುವರು ಜನ ಮಾಡ್ಬೇಡ ಚಿಂತೆ
ಬದುಕಿದೋ ಮೂರು ದಿನದ ಸಂತೆ
ಬಾಳ್ಬೇಕು ನೀನು ಮಹಾರಾಜನಂತೆ
ಪರರ ಚಿಂತೆ ನಿನಗೇಕೆ ಬೇಕಂತೆ.

ಮೋಜು ಮಸ್ತಿ ಕುಸ್ತಿಯಲಿ
ಕಳೆಯದಿರು ಸಮಯ ಜಾಸ್ತಿ
ಹಣ ಅಂತಸ್ತು ಕಳೆದುಕೊಂಡರೂ
ಮಾನವಂತನಾಗಿ ಬದುಕು ಎಂದೆಂದೂ .

ತಂದೆ ತಾಯಿ ಬಂದು ಬಳಗ
ಇರಲಿ ಯಾವಾಗ್ಲೂ ನಿನ್ನ ಸಂಗ
ಘಾಸಿಯಾದರೆ ಬಿಡು ಬಂಧುಗಳ
ಹೆತ್ತವರ ತಳ್ಳದಿರಾಚೆ ನಿನ್ನಂಗಳ.

ಹುಟ್ಟೆದ ಮೇಲೆ ಸಾವು ಬಾರದಿರದು
ಸಾವು ಬರುವ ಮುನ್ನ ನೀ ಸಾಧಿಸು
ಮೌಲ್ಯಯುತ ಬದುಕು ನಿನ್ನದಾಗಿಸು
ನಿನ್ನ ಜೀವನ ಜಗಕೆ ಮಾದರಿಯಾಗಿಸು.


Leave a Reply

Back To Top