ಕಾವ್ಯ ಸಂಗಾತಿ
ಸವಿತಾ ದೇಶಮುಖ
ʼಹೃದಯ ಪ್ರೀತಿಯ ಹಾಡುʼ
ದೇವ ಕೊಟ್ಟ ಪುಟ್ಟದೊಂದು
ಹೃದಯ ,ಇಟ್ಟ ಪ್ರೀತಿಯ !
ಹೊನಲು ,ಹುಟ್ಟಿ ಪ್ರೇಮ !
ಹುಲಸಾಗಿ ದಟ್ಟ ಬೆಳೆದು ನಿಲ್ಲುವುದಕ್ಕೆ…!
ಹೊಳೆಯುವುದೊಂದೆ ಮನಕೆ!
ಪ್ರೇಮ ಮನದ ಆಲಿಕೆ!
ಮರೆತು ದ್ವೇಷ ಅಸಮತೆ
ಉಲಿಯುವುದು ಪ್ರೀತಿಯ ಬೆಳಕೆ…..!
ಹೊತ್ತಿಸಿ ಪ್ರಜ್ವಲಿಸುವ ದೀವಿಗೆ
ಎಲ್ಲ ಮನಗಳ ಬೆಳಗೆ
ಮರೆಸುವ ಕಷ್ಟಕಾರ್ಪಣ್ಯತೆ
ಸುಖ ಸಂತೋಷದ ಆಲಯಕೆ……!
ಹೃದಯವು ಪ್ರೀತಿಯ ಉಲವು
ಮನದ ಭಾರೀ ಬಡಿವಾರ !
ಸತತ ಡಗ ಡಗ ಬಡಿತದ ಧಾರ!
ನಿಲ್ಲದ ಮಿಡಿತದ ರಾಗ……!
ಅರಿಯುವುದೊಂದೇ ಭಾಷೆ, !
ಅನುರಾಗ ತುಂಬುವ ಆಶೆ!
ಶಾಂತಿ ನೆಮ್ಮದಿಯ ಉಲುವಿಕೆ
ಮನಗಳ ತನ್ನದಾಗಿಸಿವಿಕೆ ಮನಿಶೆ…!
ಅನುರಾಗ ರಾಗದ ತುಳುಕು!
ಹೃದಯವು ಪ್ರೀತಿ ಹಾಡು!
ಮರೆತು ದುಃಖ ಅಶಾಂತಿ ಬಿಡು
ಮಮತೆ ಪ್ರೀತಿ ಶಕ್ತಿಯ ಗೇಹ…..!
ರಾಡಿಗೊಳಿಸುವರು ಹುಳಿಯ ಹಿಂಡಿ
ಬಿಳದಿರು ಅವರಿವರ ಚಾಲಕೆ…..!
ದೇವ ಕೊಟ್ಟ ಪುಟ್ಟದೊಂದು ಖಾಸಗಿ
ದೇಣಿಗೆ ವಿಮಲ ಪ್ರೀತಿಯ ಮಾರ್ಗ…..!
ಸವಿತಾ ದೇಶಮುಖ