ಕಾವ್ಯ ಸಂಗಾತಿ
ಎಸ್ಕೆ ಕೊನೆಸಾಗರ ಹುನಗುಂದ
‘ಐದು ಹಾಯ್ಕುಗಳು’
ಮಗುವೆಂದರೆ
ತಾಯಿ ಬಳ್ಳಿಲಿ ಕಾಣ್ವ
ಚೆಂದದ ಹೂವು
ಚುಕ್ಕೆಗಳೆಲ್ಲ
ದೇವ ಆಗಸಕ್ಕಿಟ್ಟ
ಒಡವೆಗಳು
ನಭ ಎಂಬುದು
ನೆಲದ ಮನೆಗಳ
ರಕ್ಷಾ ಚೆಪ್ಪರ
ಅವ್ವ ಜಗದ
ಮಕ್ಕಳ ವಾತ್ಸಲ್ಯದ
ತುಂಬಿದೊಡಲು
ಪ್ರೀತಿ ಎಂದರೆ
ಬಜಾರದಿ ಸಿಗದ
ಮೌಲ್ಯ ಸಂಪತ್ತು
ಎಸ್ಕೆ ಕೊನೆಸಾಗರ ಹುನಗುಂದ