ಅನುವಾದ ಸಂಗಾತಿ
‘ಸುಖೀ ಜೀವನದ ಸೂತ್ರಗಳು’
ಇಂಗ್ಲೀಷ್ ಮೂಲ:ಸರ್ ಹೆನ್ರಿ ಹೂಟನ್
ಕನ್ನಡಭಾವಾನುವಾದ .ಪಿ .ವೆಂಕಟಾಚಲಯ್ಯ .
ಹುಟ್ಟಿನಲಿ, ತಿಳಿವಿನಲಿ, ಸುಖವೆಂ ಬುದದು ಹೇಗೆ?
ಅದು ಎಟಕದು ಎಂದೆಂದಿಗೂ ಪರರ ಸಲಹೆಗೆ.
ಲಕ್ಷಣಗಳೆಂದರೆ; ಪ್ರಾಮಾಣಿಕ ಭೋದನೆ,
ಸರಳತೆ, ಸಭ್ಯತೆ, ಆದರ್ಶ,ಬುದ್ಧಿ ವಂತಿಕೆ.
ದ್ವೇಷ, ಸೇಡು, ಉದ್ರೇಕಕಡಿಯಾ ಳಾಗದಿರೆ,
ಸಾವಿಗಂಜದಿರೆ , ಆತ್ಮ ಸಂಪನ್ನ ವಾಗಿರೆ,
ಕೀರ್ತಿ ಪ್ರತಿಷ್ಠೆಗೆ, ಆಸೆ ಆಕಾಂಕ್ಷೆ ಗಳಿಗೆ,
ಪ್ರಾಪಂಚಿಕ ಅಮಿಷಗಳಿಗೆ, ಜೋತು ಬೀಳದಿರೆ.
ಮತ್ಸರವಿರುವಲ್ಲಿ, ಮನುಜನ ಬದುಕು ತತ್ತರ,
ಮತ್ಸರದಿಂದ ಕೆಡಕು, ಅರಿತು ನಡೆದರೆ ಒಳಿತು,
ಕೆಡಕು ಬಗ್ಗದು, ಪ್ರತಿಷ್ಠೆ ಅಧಿಕಾರ ಬಲಕೆ,
ಪರಸ್ಪರ ಒಡನಾಟ, ಇರಲಿ ಸಭ್ಯ ನಡತೆ.
ಬದಕನು ಕೆಡಸುವ, ವದಂತಿಗಳನು ಕಡೆಗಣಿಸಿ,
ಮನ:ಸಾಕ್ಷಿಯನನುಸರಿಸಿ, ಅಡೆತಡೆ ಯ ಹಿಮ್ಮೆಟ್ಟಿ ,
ಹೊಗಳಿಕೆಗೆ ಹಿಗ್ಗದಿರೆ, ತೆಗಳಿಕೆಗೆ ಕುಗ್ಗದಿರೆ,
ಮುನ್ನಡಿಯನ್ನಿಡಲು, ದಬ್ಬಾಳಿಕೆ ಯ ನಿಗ್ರಹಿಸಿ.
ಬೆಳಗು- ಬೈಗುನಲಿ, ಭಗವಂತನ ಸ್ಮರಣೆಯಲಿ,
ಬೇರೆಲ್ಲದಕ್ಕಿಂತ ಅವನ ಅನುಗ್ರಹ ವ ಕೋರುತಲಿ,
ಉತ್ತಮಾಯ್ಕೆಯ ಪುಸ್ತಕಗಳು , ಗೆಳೆಯರೊಂದಿಗೆ,
ಆರಾಮದಾಯಕವಾಗಿ, ದಿನವ ಕಳೆಯುತಲಿ.
ಇಂತಿರ್ಪ ಮನುಜನು,ಯಾರ ಗುಲಾಮನು ಅಲ್ಲ.
ಪ್ರಗತಿಯ ನಂಬಿಕೆ, ಅದ:ಪತನದ ಬಯವಿಲ್ಲ.
ತಾನು ಒಡೆಯನಾದರು, ಭೂಮಿ ಕಾಣಿ ಇಲ್ಲ.
ಎಲ್ಲವೂ ಉಂಟೆನುವ ಅವನಲಿ, ಏನೂ ಇಲ್ಲ.
ಇಂಗ್ಲೀಷ್ ಮೂಲ:ಸರ್ ಹೆನ್ರಿ ಹೂಟನ್
ಕನ್ನಡಭಾವಾನುವಾದ .ಪಿ .ವೆಂಕಟಾಚಲಯ್ಯ .