ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಡಬೇಕು ಆಡಬೇಕು
ಆಡಬೇಕೂ ಆಟಕ್ಕಾಗಿ
ಇದ ಬಿಟ್ಟರೆ ಆಡಬೇಕು ಏತಕ್ಕಾಗಿ?!

ಗೆಳೆಯರು ಇರತಾರೆ
ಗೆಳತಿಯರು ಬರತಾರೆ
ಕೂಡಿ ಆಡುವುದು ಮುಖ್ಯ
ಅದಕೂ ಮಿಗಿಲು ಇವರ ಸಖ್ಯ

ನಡುನಡುವೆ ಇರತದೆ ಜಗಳ
ಆಗತದೆ ಮನಸ್ಸು ಝಳಝಳ
ಹೊಳೀತದೆ ಗೆಳೆತನ ಫಳಫಳ!

ಗೆದ್ದವರಿಗೆ ಗೆಲವೋಂದೇ ಬಹುಮಾನ!
ಸೋತವರಿಗೆ ಇಲ್ಲವೇ ಇಲ್ಲ ಅವಮಾನ!
ಗೆದ್ದರೂ ಸೋತರೂ ಯಾರಿಗೂ ಇಲ್ಲ ಬಿಗುಮಾನ!

ಆಡಬೇಕೂ ಅಂತನೇ
ಆಡತೀವಿ
ಕೂಡಿ ಇರಬೇಕೂ ಅಂತನೇ
ಕೂಡಿ ಇರತೀವಿ!
ಲೋಕದ ಜಗಳವ ಲೋಕಕೇ
ಬಿಡತೀವಿ
ಬದುಕಿನ ಬಂಡಿ ನಿಲ್ಲದಂಗ
ಹೊಡೀತೀವಿ!


About The Author

2 thoughts on “ಶಿಹೊಂ ಮಕ್ಕಳ ಕವಿತೆ-ಆಡಬೇಕೂಂತ ಆಡಬೇಕು”

  1. ಬಹಳ ಚೆನ್ನಾಗಿದೆ ಈ ಕವನ….
    ಬರೀ ಗೆಲುವು ಹಿಂದೆ ಓಡುತ್ತಿರುವ ಜಗತ್ತಿಗೇ ಇದು ಉತ್ತರ ಆಗಬಲ್ಲದು….
    ವಂದನೆಗಳು ಸರ್

    1. ಕವನದ ಆಶಯವನ್ನು ಸರಿಯಾಗಿ ಗ್ರಹಿಸಿ, ಒಳ್ಳೆಯದು ಮಾತುಗಳನ್ನೂ ಆಡಿದ್ದೀರಿ. ಧನ್ಯವಾದಗಳು.

Leave a Reply

You cannot copy content of this page

Scroll to Top