ಚುಮು ಚುಮು ಚಳಿಯಲಿ ಬೆಚ್ಚಗೆ ಹೊದ್ದು
ಸವಿಗನಸಲಿ ಮಿಂದೆದ್ದು
ನೆಮ್ಮದಿಯಲಿ ನಗುತ ಎದ್ದು
ನನ್ನವರಿಗೆ ಅಂದೆ ಬೆಳಗಾಯ್ತು ಎದ್ದೇಳಿ ಎದ್ದೇಳಿ
ಸ್ವಲ್ಪ ಇರು ನೋಡು ಎಷ್ಟೊಂದು ಚಳಿ
ಬರುವೆಯಾ ನೀ ನನ್ನ ಬಳಿ
ತಿಂಡಿ ತಡವಾದರೆ ಮಾಡುವಿರಿ ವಾಗ್ದಾಳಿ
ನಾ ವಾದಕ್ಕಿಳಿದರೆ ಆಗುವೆ ಗಯ್ಯಾಳಿ
ತಾಳು ಮಾರಾಯ್ತಿ ಕೂಗಲಿ ಇನ್ನೊಮ್ಮೆ ಅಲಾರಂ ಕೋಳಿ..
ಎದ್ದ ಮೇಲೂ ಕೊರೆವ ಚಳಿ
ಚಳಿಗಾಲದಲ್ಲೂ ಬರ್ತಾಯ್ತೆ ಮಳಿ
ಇಳೆಗೆ ಇಬ್ಬನಿಯ ಮುತ್ತಿನ ಮಣಿ
ಬೇಗ ಕಾಫಿ ಕೊಟ್ಟರೆ ನೀ ಬಲು ಜಾಣಿ
ಏನೇಳಿದ್ರಿ ಕೇಳುಸ್ಲಿಲ್ಲ ಕಣ್ರೀ..
ನನ್ನ ಶ್ರೀಮತಿ ಜಾಣ ಕಿವುಡಿ ನೋಡ್ರಿ…
ನನ್ನ ಮುದ್ದು ಮಡದಿ ಭವ್ಯ
ಹೆಚ್ಚು ಬರೆಯುವಳು ಕಾವ್ಯ
ಓ ಪ್ರಿಯೆ ನಿನಗಾಗಿ ಹಾಕಿರುವೆ ರಜೆ
ಕಾಡಿಸಿ ಕೊಡಬೇಡ ಸಜೆ
ನನಗಾಗಿ ಮಾಡಿಕೊ ಪುರುಸೊತ್ತು
ನಾವಿಬ್ಬರು ಒಲುಮೆಯಲಿ ಕಳೆಯೋಣ ರಸಮಯ ಹೊತ್ತು
ತಿನಿಸುತ್ತ ಸವಿ ತುತ್ತು
ಕೊಡು ಆಗಗಾ ಸವಿ ಮುತ್ತು
ಅದೇ ನನಗೆ ತಾಕತ್ತು
ಒಡೆದೋಡಿಸುವುದು ಸುಸ್ತು
ಈ ದಿನ ಪೂರ್ತಿ ಗಮ್ಮತ್ತು


Leave a Reply

Back To Top