ಕಾವ್ಯ ಸಂಗಾತಿ
ಹೇಮಚಂದ್ರ ದಾಳಗೌಡನಹಳ್ಳಿ
ತಾದಾತ್ಮ್ಯ
ತುಂತುರಲಿ ಮಿಂದ ತನುವಿನಂಗಳದಿ ಬಿರಿದ ಬಯಕೆಗಳು
ಬಿರುಸಾಗಿ ಬಿಸಿಗಾಗಿ
ನಿನ್ನ ಮೈ ನೆರೆಯ ಬಯಸಿ ಹಾತೊರೆದಿವೆ
ಸೆರಗಂಚಿನ ಸಲ್ಲಾಪಕೆ ಸಲುಗೆಯ ಸಹಕಾರ ಬೇಡಿ
ತೋಯ್ದ ಮೈಯನು ಮೃದುವಾಗಿ ಮುದ್ದಿಸಲು
ಮದವೇರಿದಂತಾಗಿವೆ
ಬಿಗಿದೆದೆಯ ಮೆದುವ ಮೋಹಿಸುತ
ಮುತ್ತಿನ ಮತ್ತು ಮಣಿಗಳ ಪೋಣಿಸಿ
ನೆನೆದೆದೆಯ ಬಿಗಿದೊತ್ತಿ ಉಸಿರಿಗುಸಿರ ಹದವಾಗಿ ಹಂಚಿಕೊಳ್ಳಲು ಹೊಂಚುತಿವೆ
ಬಿಸಿಯೇರಿದ ನಡುಕುಸಿರಲಿ
ನಡು ನಡುಗಿದಂತೆ
ಕಂಪಿಸುವ ಆ ತೆಳೋದರಕೆ
ಅರಿವಿಗರಿವಿರದಂತೆ
ಸೋಕಿದ ಕೈ ಅಂಟಿಕೊಂಡಿದೆ
ಹೊಸದೇನೋ ತನುವಿಗುಡಿಸಿ
ಋಣಪಡೆದ ಸಂತೃಪ್ತಿಯಲಿ
ತಾದಾತ್ಮ್ಯ ಭಾವ ತಳೆದಿದೆ ನಿನ್ನಲಿ
————–
ಹೇಮಚಂದ್ರ ದಾಳಗೌಡನಹಳ್ಳಿ
Thank you
ಕವಿತೆ ಸೊಗಸಾಗಿದೆ ಸರ್.. ಅಭಿನಂದನೆಗಳು!
ಉಸಿರಿಗುಸಿರ ಹದವಾಗಿ ಹಂಚಿಕೊಳ್ಳಲು ಸಂಚು ರೂಪಿಸದೆ,ಹೊಂಚು ಹಾಕಿ,ಮೈಮನಗಳೆರಡರಲ್ಲೂ ಮಿಂಚು ಸಂಚರಿಸಲು,ತೃಪ್ತಭಾವ ತಾಳಲು ಕಾರಣೀಭೂತವಾದ ಆ ಕರಗಳಿಗೆ,ಭಾವಬುತ್ತಿಯನ್ನು ಅಕ್ಷರಗಳಲ್ಲಿ ಪೋಣಿಸಿದ ನಿಮ್ಮ ಕರಗಳಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.
Chennagide sir..