ಕಾವ್ಯ ಸಂಗಾತಿ
ರೋಹಿಣಿ ಯಾದವಾಡ
‘ಶೃಂಗಾರ ಸಿಂಗಾರಿ’
ಚಂದ್ರಮುಖಿಗೆ ಶ್ರೀಗಂಧ ಪೌಡರ
ನವಿಲಂತ ನಯನಕೆ
ಕಪ್ಪುಕಾಡಿಗೆ
ಕಾಮನಬಿಲ್ಲಿನ ಹುಬ್ಬಿಗೆ
ತೀಡಿದ ಕಪ್ಪು
ದುಂಡನೆ ಮುಖಮಧ್ಯೆ ಕುಂಕುಮ ಬೊಟ್ಟು..
ಸೇಬಂತಹ ಕದಪುಗಳಿಗೆ ರೋಜಿನ ಬಣ್ಣ
ಬೀರಿದ ಅದರಗಳಿಗೆ ನಸುಗೆಂಪು ಲಿಪ್ಟಿಕ್
ಗುಳಿಬಿಳ್ವ ಕೆನ್ನೆಗಳಿಗೆ ಅರಷಿನ ಬೊಟ್ಟು
ಕೆನ್ನೆಯ ಇಳಿಜಾರಲಿ ನದಿರಿನ ಬೊಟ್ಟು.,
ಸಂಪಿಗೆ ಮೂಗಿಗೆ
ಮುತ್ತಿನ ಮೂಗುತಿ
ಎಲೆಯಂತ ಕಿವಿಗ ಲೋಲಾಕ ಜುಮಕಿ
ತಲೆಮಧ್ಯ ಇಳಿಬಿದ್ದ ಬೇತಲಪಟ್ಟಿ
ನೀಲಜಡೆಗೆ ಮಲ್ಲಿಗೆ ಕನಕಾಂಬರ ಮಾಲೆ…
ಮೈಮಾಟಸಿರಿಗೆ ಅಂದದ ಜರಿಸೀರೆರವಿಕೆ
ಸೊಂಟಕೆ ಡಾಬು ತೋಳಿಗೆ ತೋಳಬಂಧಿ
ನವಿರು ಉದ್ದದ ಕತ್ತಿಗೆ ಕರಿಮಣಿ ಸರ
ನೀಲಬೆರಳುಗಳಲಿ
ಮಾಟಿನುಂಗುರ..
ಮುಂಗೈನಲ್ಲಿ ಸಾಲು ಗಾಜಿನ,ಚಿನ್ನದ ಬಳಿ
ಕಾಲಿಗೆ ಬೆಳ್ಳಿಯ ಕಾಲ್ಗೆಜ್ಜೆ, ಬೆರಳಿಗೆ ಕಾಲುಂಗರ
ಮುಖದಂದ ಹೆಚ್ಚಿಗೆ ಸುರಳಿ ಮುಂಗುರುಳ
ಹೆಣ್ಣಿನ ಸಿಂಗಾರಕೆ ಕೊನೆ ಎಂಬುದಿಲ್ಲ.
ರೋಹಿಣಿ ಯಾದವಾಡ