ಪ್ರಿಯ ನಾನಿಲ್ಲಿ ಕಾದಿರುವೆ ನಿನಗಾಗಿ
ನಿದ್ದೆ ಬರಲಿಲ್ಲ ನಿನ್ನ ಮೇಲೆ ಮನಸಾಗಿ!
ಕನಸಲ್ಲೂ ಹೃದಯ ಬಡಿತ ಜೋರಾಗಿ
ಈ ಜೀವ ಕಾಯುತಿದೆ ನಿನ್ನ ಉಸಿರಾಗಿ!!

ಇಬ್ಬರನ್ನು ಚಳಿಗಾಲವು ಹತ್ತಿರಕ್ಕೆ ಕರೆಯಿತು
ಬೆಚ್ಚಗಿನ ತೋಳ ಬಯಕೆಯು ನನಗಾಯಿತು!
ನನ್ನ ಗಲ್ಲಗಳು ಮುತ್ತಿಕ್ಕಿ ಸನ್ನೆಯ ಮಾಡಿತು
ಅವಳ ಕೆನ್ನೆಯು ನನ್ನ ಅತ್ತಿರ ಬಾ ಎಂದಿತು!!

ಪಕ್ಕ ತಿರುಗಿ ಮುಗುಳು ನಗೆಯ ಬೀರಿದಳು
ನನ್ನ ನೋಟಕೆ ಅವಳು ಮೃದು ಹೂವಾದಳು!
ಮುಸ್ಸಂಜೆ ಹೊತ್ತು ಚುಮು ಚಳಿಯ ನಶೆಯಲ್ಲಿ
ಅವಳ ಮೈ ತಾಪಕ್ಕೆ ನಾನಿಲ್ಲಿ ಕರಗಿದೆನಲ್ಲಿ!!

ಬಿಸಿ ಉಸಿರಿನ ಮುತ್ತುಗಳು ಇನ್ನೂ ಬೇಕಾಗಿದೆ
ಚಂದ್ರನ ಬೆಳದಿಂಗಳು ಇಲ್ಲಿ ನಕ್ಷತ್ರ ಬೇಕೆಂದಿದೆ!
ನನ್ಮವಳ ನೋಟವು ನನ್ನ ಮಂಚಕ್ಕೆ ನೂಕಿದೆ
ಅಯ್ಯೋ ಸಾಲದು ನನಗೀಗ ಮತ್ತೇ ಮತ್ತೇರಿದೆ!!


One thought on “

Leave a Reply

Back To Top