ತಥರಗುಟ್ಟಿಸುವ ಚಳಿಯ ರಾತ್ರಿ
ಜನನಿ ಮಡಿಲ ಬೆಚ್ಚನೆ ಪ್ರೀತಿ
ಬಾಹು ಬಂಧ ,ಒಡಲ ಸೌಖ್ಯ ತೃಪ್ತಿ
ನೂರೆಂಟು ಹಚ್ಚಡ ಹೊಚ್ಚಿ ಬೆಚ್ಚಗಿಟ್ಟಿ…..

ಮಿಸುಕಾಡಿದರೆ ವಿಚಲಿತವಾದೆಮ್ಮ
ನಿನ್ನ ರಕ್ಷೆಯ‌ ಅನುಭಾವದಮ್ಮ
ಇನ್ನೂ ಹೊಚ್ಚಿ ಚಳಿ ತಾಗದಿರಲೆಂದು
ಕೂಡಿಟ್ಟಿ ಕಂಕುಳಿನ ಗೂಡಿನಲ್ಲಿ…..

ನಿಶ್ಚಿಂತೆ-ನಿರಾಳದಲಿ ನಿದ್ರೆಲಿ
ನೀನ್ನ ಹೋದಿಕೆ ಒಡಲಿನಲಿ
ಸುರಕ್ಷತಿಯ ಭಾವ ಪರಿಮಳದಲಿ
ನಿದ್ದೆಯ ಮಬ್ಬಿನಲ್ಲಿ…….

ಅಪ್ಪಿ ನನ್ನ ಮುದ್ದಾಡಿ
ಉಕ್ಕೂತಿರೆ ಕರುಳಿನ ಸುಧಾರಸ
ಸ್ವರ್ಗ ಸುಖವ ಅರಿಯದಾದೆ ಅಂದು
ಅತಿವ ಹಿಂಸೆಯ ಭಾಸುವು….

ಎನಿತು ವಾತ್ಸಲ್ಯವಿದೆಂದು
ಸ್ವಲ್ಪ ಹೊತ್ತು ದೂರ ಸರಿದು
ಉಸಿರು ಕಟ್ಟುತಿದಿದೆಂದು
ನಿನ್ನ ಅಪ್ಪುಗೆಯಿಂದ ಸರಿದು ದೂರ…

ಇಂದು ನಿಶಬ್ದ ರಾತ್ರಿಯಲ್ಲಿ
ದಟ್ಟ ಚಳಿಯಲಿ ಇಳೆಯಲಿ
ಸ್ಮಶಾನ ಮೌನದ ರಸ್ತೆಯಲಿ
ದೀಪ ಕಂಬಗಳ ಕೆಳಗೆ ….

ಅನಾಥ ಮಕ್ಕಳ ನಡಕು
ನನ್ನೆದೆಯ ಸೀಳಿ ರೋಧಿಸುತ್ತಿದೆ
ನೆನೆಯುತ್ತಾ ಎನ್ನ ಅಬ್ಬೆಯ
ನರನಾಳದ ರಕ್ಷದಲಿ ನುಲಿದು ,

ಬೆಳೆದು ಸಂತಸದಲಿ ಬಿಸಿಲು
ಮಳೆ ಚಳಿ- ದುಃಖ ದುಮ್ಮಾನ
ಇಟ್ಟಿ ನಮ್ಮ ದೂರ ಬಲು ದೂರ
ಅರಿಯದಾದೇವೋ ನಿನ್ನ
ಸಾಧ್ವಿಯಾತ್ಮದ ಸೈರಣೆ………

ತಥರಗುಟ್ಟಿಸುವ ರಾತ್ರಿಗಳು ಮತ್ತೇ
ಬಂದಿವೆ ಅಮ್ಮ ಮತ್ತೆ ಬರುವೆಯಾ
ಗಟ್ಟಿಯಾಗಿ ಬಂಧಿಸುವೆಯಾ
ಉಸಿರುಗಟ್ಟಿಸುವೆಯಾ………


Leave a Reply

Back To Top