ಸ್ನೇಹಾ ಮಹಾದೇವ ಬಗಲಿ ಅವರ ಕಿರುಬರಹ-ಮನಸ್ಸು ಬದಲಾಯಿಸು ಗುರಿಯನಲ್ಲ..!

ಮನಸ್ಸು ನೂರಾರು ಭಾವನೆಗಳ ಮಹಾಸಾಗರ. ಅತಂತ್ಯ ಆಳ, ಶಾಂತ, ಭಯಾನಕ, ರುದ್ರರಮಣೀಯ. ಆ ಮನಸ್ಸಿನ ವೇಗ ತಡೆಯಲು ಸಾಧ್ಯವಿಲ್ಲ. ಆಲೋಚನೆಯ ಅಲೆಗಳನ್ನು ನಿಲ್ಲಿಸಲು ಆಗುವುದಿಲ್ಲ. ಆದರೂ ಕೂಡಾ ನಾವು ಮನಸ್ಸನ್ನು ಶಾಂತ ಸಾಗರದಂತೆ ಇರಿಸಬಹುದು ಅದು ನಮ್ಮ ಕೈಯಲ್ಲಿಯೇ ಇದೆ.
ಒಮ್ಮೆ ಮನಸ್ಸು ಮಾಡಿದರೇ ಆಗದು ಎಂಬ ಪದಕ್ಕೆ ಆ ಮನಸ್ಸಿನಲ್ಲಿ ಜಾಗವೇ ಇಲ್ಲ. ಇಂತ ಆಗಾಧ ಶಕ್ತಿಯನ್ನು ಹೊಂದಿದ ನಾವುಗಳು ಏಕೆ ಮನಸ್ಸು ಮಾಡುತ್ತಿಲ್ಲ..?
ನಾವೇಕೆ ನಮ್ಮ ಕನಸ್ಸಿಗೆ ಏಣಿ ಹಾಕುತ್ತಿಲ್ಲ..?
ನಮ್ಮ ಕನಸಿಗೆ ಏಕೆ ಬೆನ್ನಟ್ಟುತ್ತಿಲ್ಲ..?
ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ..!

ನೂರೆಂಟು ಜವಾಬ್ದಾರಿ.., ಸಾವಿರಾರು ನೇಪಗಳು.., ಇವೆಲ್ಲದರ ನಡುವೆಯೂ ಚಿಗುರೊಡೆಯೋ ಕನಸ್ಸುಗಳನ್ನು ಚಿವುಟಿ ಹಾಕದೇ ಹೆಮ್ಮರವಾಗಿ ಬೆಳೆಸಬೇಕು. ಪ್ರಯತ್ನವನ್ನು ಪಡಬೇಕು. ಶ್ರೀ ಕೃಷ್ಣ ಪರಮಾತ್ಮ ಹೇಳಿದ ಹಾಗೆ ಪ್ರಯತ್ನ ಪಟ್ಟರೆ ಸಿಗಬಹುದು ಎಂದು ಹಣೆಬರಹದಲ್ಲಿ ಬರದಿದ್ದರೆ..! ಆದ ಕಾರಣ ನಾವು ಸೋಲ ಬಾರದು ಸೋಲೆ ಗೆಲುವಿನ ಸೋಪಾನ.., ಸೋತು ಗೆಲ್ಲಬೇಕು ಭಯ, ಹಿಂಜರಿಕೆ ಅವಮಾನ ಇವೆಲ್ಲವುಗಳನ್ನು ನಾವು ದಾಟಿ ಒಂದು ಹೆಜ್ಜೆ ಮುಂದೆ ಇಡಬೇಕು. ಕಲ್ಲು ಎಸೆಯುತ್ತಲೇ ಇರಬೇಕು ಒಂದು ಕಲ್ಲಾದರು ತಗುಲಿ ಹಣ್ಣು ಸಿಗುವುದು. ಒಂದಲ್ಲ ಒಂದು ದಿನ ನಮ್ಮ ಶ್ರಮಕ್ಕೆ ಪ್ರತಿಫಲ ದೊರೆಯುವುದು.
ಮೊದಲು ಕನಸ್ಸು ನನಸು ಮಾಡಲು ಮನಸ್ಸು ಮಾಡಬೇಕು . ಆಲಸ್ಯವನ್ನು ಮೆಟ್ಟಿನಿಲ್ಲಬೇಕು. ಬಿಡದೆ ದಿನವೂ ಪ್ರಯತ್ನ ಮಾಡಬೇಕು. ಕನಸ್ಸು ನನಸಾಗುವರೆಗೂ ಎಂತಹ ಸಮಸ್ಯೆಗಳು ಬಂದರು ಬಂಡೆಯಂತೆ ಎಡೆಗೊಟ್ಟು ನಿಲ್ಲಬೇಕು. ಇದು ಜೀವನ ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಜೀವನದ ಸಮರದಲ್ಲಿ ಹೋರಾಡುತ್ತಾ ಸಾಗಲೇಬೇಕು ಸಾಧನೆಯ ಶಿಖರ ಏರಲೇ ಬೇಕು…,
” ಮನಸ್ಸು ಬದಲಾಯಿಸು ಗುರಿಯನಲ್ಲ…!


One thought on “ಸ್ನೇಹಾ ಮಹಾದೇವ ಬಗಲಿ ಅವರ ಕಿರುಬರಹ-ಮನಸ್ಸು ಬದಲಾಯಿಸು ಗುರಿಯನಲ್ಲ..!

  1. ಸಕಾರಾತ್ಮಕ ಚಿಂತನೆಗಳು ಲೇಖನ ರೂಪದಲ್ಲಿ ಹೊರಹೊಮ್ಮಿದೆ ಉನ್ನತ ವಿಚಾರಗಳು.

Leave a Reply

Back To Top