ಕಾವ್ಯ ಸಂಗಾತಿ
ಬದ್ರುದ್ದೀನ್ ಕೂಳೂರು
‘ಬದುಕಲು ಕಲಿಯಬಹುದು‘
ಬದುಕಲು ಕಲಿಯಬಹುದು
ಮನಸುಗಳಿಗೆ
ಕನಸುಗಳಿರಲಿ….
ನನಸಾಗದಿದ್ದರೂ….
ಬದುಕಲು ಕಲಿಯಬಹುದು….!
ಪಯಣಗಳಿಗೆ
ಗುರಿ ಇರಲಿ…..
ಈಡೇರದಿದ್ದರೂ….
ಬದುಕಲು ಕಲಿಯಬಹುದು….!
ಭಾವನೆಗಳಿಗೆ
ಮಾತುಗಳಿಲ್ಲ ನಿಜ….
ಮೌನವಾಗಿದ್ದೂ…..
ಬದುಕಲು ಕಲಿಯಬಹುದು….!
ಸಂಬಂಧದಲಿ
ಆತ್ಮಾಭಿಮಾನವಿರಲಿ…
ಬಂಧ ಮುರಿದರೂ…..
ಬದುಕಲು ಕಲಿಯಬಹುದು….!
ನಾವಿದ್ದರೂ ಇಲ್ಲದಿದ್ದರೂ
ನೆನಪಿರಲಿ ಈ ಜಗದಲಿ…
ಬದುಕುವುದು ಹೇಗೆಂದು…
ಪ್ರತಿಯೊಬ್ಬರೂ ಕಲಿಯಬಹುದು..
ಬದ್ರುದ್ದೀನ್ ಕೂಳೂರು
Super