ಕಾವ್ಯ ಸಂಗಾತಿ
ಹನಿಬಿಂದು
ಆರೋಗ್ಯವೇ ಸಂಪತ್ತು
ಆರೋಗ್ಯವೇ ಸಂಪತ್ತು
ಅನಾರೋಗ್ಯವೇ ಆಪತ್ತು
ಅವಿರತ ದುಡಿಮೆಯೇ ಗಳಿಕೆ
ಶಿಸ್ತಿನ ಬದುಕೇ ಉಳಿಕೆ
ಆಹಾರ ನೀರು ಸೇವಿಸುವ ವಾಯು
ವಿಹಾರ ನಡಿಗೆ ಅಲ್ಪ ವ್ಯಾಯಾಮ
ಹಸನ್ಮುಖ ಉದಾತ್ತ ಆಲೋಚನೆ
ಸಮಾಜ ಸೇವೆ ಪರರ ಚಿಂತನೆ
ಬಾಳ ಒಳಿತಿಗೆ ಸದಾ ಪ್ರಾರ್ಥನೆ
ಒಂದಿಷ್ಟು ವಿಶ್ರಾಂತಿ , ಓದು, ನಿದ್ದೆ
ಮಕ್ಕಳು, ಹಿರಿಯರ ಜೊತೆ ಹರಟೆ
ಬಡವರ ಕಾಳಜಿ ನಿರ್ಗತಿಕರಿಗೆ ದಾನ
ನೋವಿಗೆ ಸ್ಪಂದನೆ ನಲಿವಿಗೆ ಸಂತಸ
ಜನರ ಜೊತೆ ನಿಷ್ಕಲ್ಮಶ ಸ್ನೇಹ
ಪ್ರಾಣಿ ಪಕ್ಷಿಗಳಿಗೆ ತೊಂದರೆ ಕೊಡದೆ
ನೆರೆಮನೆಯ ಜೊತೆ ಜಗಳವ ಆಡದೆ
ಹಿರಿಯರಿಗೆ ಗೌರವದ ಮುತ್ತು
ಮಕ್ಕಳಿಗೆ ಪ್ರೀತಿಯ ತುತ್ತು
ತಂದೆ ತಾಯಿಗೆ ಹೆಮ್ಮೆಯ ಮಗು
ಸಮಾಜಕ್ಕೆ ಗೌರವ ತರುವವನಾಗು
ಎಲ್ಲದಕ್ಕೂ ಬೇಕು ಉತ್ತಮ ಆರೋಗ್ಯ
ಉಸಿರು ನಿಲ್ಲದೆ ನಡೆದಾಡುವ ದೇಹ
ರೋಗಗಳಿಲ್ಲದ ಆರೋಗ್ಯ ಮನಸ್ಸು
ಆಗ ಗೊತ್ತಾಗದು ನಮ್ಮ ನಿಜ ವಯಸ್ಸು
ಯೋಗ ಭೋಗ ರಾಗವಿರಲಿ
ಸುಯೋಗ ಬರಲು ಖುಷಿ ತರಲಿ
ಮಕ್ಕಳಂತೆ ಆಟ ಪಾತವಿರಲಿ
ಹಿರಿಯರೊಡನೆ ಹಿತಮಿತ ಊಟವಿರಲಿ
ಹೊರಗಿನ ಆಹಾರ ಬೇಡವೇ ಬೇಡ
ಮನೆಯಲಿ ಬೇಯಿಸಿ ರುಚಿ ನೋಡ
ಎಣ್ಣೆ ಮಸಾಲೆ ಮನೆಯದೆ ಇರಲಿ
ಬೇಡದ ರುಚಿಯ ಬಳಕೆ ನಿಲ್ಲಲಿ
ಆರೋಗ್ಯವೇ ಭಾಗ್ಯವಾಗಿದೆ
ಅನಾರೋಗ್ಯವೇ ರೋಗವಾಗಿದೆ
ರಾತ್ರಿ ನಿದ್ದೆ ಹಗಲು ಕಾರ್ಯ
ದೇವ ನೀಡುವ ಬಾಳಿಗೆ ಧೈರ್ಯ
————————————
ಹನಿಬಿಂದು