ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಗೂಡು
ಗೂಡಿಲ್ಲದ ಕೋಗಿಲೆಯ ಕೊರಗು
ಕೋಗಿಲೆಗಷ್ಟೇ ಗೊತ್ತು
ಹುಡುಕ ಬೇಕು ಕಾಗೆಯ ಗೂಡು
ಮೊಟ್ಟೆಯನ್ನು ಇಡುವ ಹೊತ್ತು
ಪ್ರತಿ ಜೀವಿಗೂ ಬೇಕೆ ಬೇಕು
ನೆಲೆಸಲು ಒಂದು ಸ್ವಂತ ನೆಲೆ
ಸ್ವಂತದ ಮನೆ ಮಕ್ಳಿದ್ರೆ
ಬದುಕಿಗೊಂದು ಬೆಲೆ
ಯಾರದೋ ಬಾಡಿಗೆ ಮನೆಯಲ್ಲಿ
ಇರದು ನೆಮ್ಮದಿಯ ಸೆಲೆ
ಹಂಗಿನ ಅರಮನೆಯಲ್ಲಿ
ಸಿಗದು ಶಾಂತಿ ಸಂತೃಪ್ತಿಗೆ ನೆಲೆ
ಮನೆ ಇರದವರ ಗೋಳು
ಬೀದಿ ನಾಯಿಯ ಪಾಡು
ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ
ಈ ನಮ್ಮ ಜೀವನ ನೋಡು
ಬಂದು ಹೋಗುವ ನಡುವೆ
ಇರಲೇ ಬೇಕು ನಮ್ಮದೇ ಸೂರು
ನೆಮ್ಮದಿಯ ನೀಡುವುದು
ಪುಟ್ಟ ಗುಬ್ಬಚ್ಚಿ ಗೂಡು
ಯಾರ್ಯಾರಾ ಹಣೆಯಲ್ಲಿ
ಏನಿದೆಯೋ ಯಾರಿಗೆ ಗೊತ್ತು
ನಿರುಮ್ಮಳವಾಗಿ ಸಾಗಲಿ
ಇಂದು ಈ ಹೊತ್ತು
ಸಿಗಲಿ ಎಲ್ಲರಿಗೂ ಒಂದೇ ಒಂದು
ನೆಮ್ಮದಿಯ ಕೈ ತುತ್ತು
ನಾಗರಾಜ ಜಿ. ಎನ್. ಬಾಡ
ಪ್ರವಾಸಕ್ಕೆ ಸೀಮಿತ. ಪದ್ಯ, ಪದ್ಯದ ರೀತಿ ಇಲ್ಲ.