ಕಾವ್ಯ ಪ್ರಸಾದ್ ಅವರ ಕವಿತೆ-ಮರಣದ ವಿಧಿ

ಉರಿಯುವ ಜ್ವಾಲೆಯ ಬೆಂಕಿ ಆರಲು ಸಾಧ್ಯವೇ
ಹೃದಯಕ್ಕೆ ಆದ ನೋವಿನ ಗಾಯ ಮರೆಯಲು ಮನಸಿಲ್ಲವೇ!
ದೇಹದ ಮೇಲಿನ ಗಾಯಕ್ಕೆ ಮದ್ದು ಅಚ್ಚಬಹುದು
ಒಳಗೊಳಗೇ ಸುಡುವ ಕಿಚ್ಚು ನಮ್ಮನ್ನು ಸುಡುವುದು!!

ನಮಗಿದು ಕಾಲ ಕಲಿಸುವ ಪಾಠ ಯಾರು ತಿಳಿದಿಲ್ಲ
ಮುಂದೆ ನಮ್ಮದೇನಿಲ್ಲ ಹಿಂದೆ ಬರುವುದೇನಿಲ್ಲ!
ವಿಧಿಯ ಆಟಕ್ಕೆ ಕೇವಲ ನಾವು ಪಾತ್ರದಾರಿಗಳು
ಅಷ್ಟೇ ಜೀವನ ಭಗವಂತ ಬರೆದೆ ಪಾತ್ರದ ಸೂತ್ರಗಳು!!

ಅಲ್ಲಿ ನೋಡು ಮೇಲೊಬ್ಬನಿರುವನು ಯಾರು ಕೇಳರು
ಈ ಭೂಮಿ ಆಕಾಶದ ನಡುವೆ ನಾವು ಪಯಣಿಗರು!
ಹುಟ್ಟಿ ಬರುವಾಗ ನಾವುಗಳೇನು ತರಲಿಲ್ಲ
ಸತ್ತು ಹೋಗುವಾಗ ಏನೂ ಕೊಂಡೋಗಲಿಲ್ಲ!!

ಇರೋ ಮೂರು ದಿನಕೆ ನಾವು ಬಡಿದಾಡಿ ಕೊಳ್ಳುತ್ತೇವಲ್ಲ
ಇಲ್ಲಿ ಯಾರಿಗೂ ಪಾಪಗಳ ಪುಣ್ಯಗಳ ಅರಿವಿಲ್ಲ!
ಎಲ್ಲರು ಲೆಕ್ಕವಿಲ್ಲದಷ್ಟು ತಪ್ಪು ಮಾಡಿಬಿಟ್ಟರಲ್ಲ
ಗುರಿ ಇಲ್ಲ ಯಾರಿಲ್ಲ ನಡೆದಿದ್ದೆ ದಾರಿ ನಮ್ಮದೆಲ್ಲ!!

ಮರಣದ ವಿಧಿಯೇ ಇದು ಸರಿಯೇ ಹೆತ್ತು ಹೊತ್ತವರ ಬಿಟ್ಟೆ
ಮರಳಿ ಬಾರದ ಊರಿಗೆ ಪ್ರಯಾಣ ಕಟ್ಟಿ ಕೊಟ್ಟೆ!
ಋಣದ ಭಾರ ಹೊತ್ತು ದೀಪ ಆರಿ ಮಸಣವ ಸೇರಬೇಕೆ
ದುಃಖದ ದೇಹ ಭಾರ ಇಡಿ ಮಣ್ಣು ಹಾಲು ತುಪ್ಪ ಸುರಿಯಬೇಕೆ!!


2 thoughts on “ಕಾವ್ಯ ಪ್ರಸಾದ್ ಅವರ ಕವಿತೆ-ಮರಣದ ವಿಧಿ

  1. ಅಚ್ಚಬಹುದು ಅಲ್ಲ ಹಚ್ಚುವುದು
    ಬರೆದೆ –ಬರೆದ
    ಕೊಂಡು+ಓಗಲಿಲ್ಲ-ಕೊಂಡೋಗಲಿಲ್ಲ ತಪ್ಪು
    ಕೊಂಡು+ಹೋಗಲಿಲ್ಲ-ಕೊಂಡು ಹೋಗಲಿಲ್ಲ

Leave a Reply

Back To Top