ಕಾವ್ಯ ಸಂಗಾತಿ
ತಿಲಕಾ ನಾಗರಾಜ್ ಹಿರಿಯಡಕ
‘ಇನ್ನೇನೂ ಉಳಿದಿಲ್ಲ’
ನಿನ್ನ ನೆನಪಲೇ
ಗೀಚಿದೆ ನೋಡು
ಒಂದೆರಡು ಸಾಲುಗಳ
ಕವಿಯೆಂದರು ಎಲ್ಲಾ
ಅದೇನೋ ನೋವಲಿ
ಬರೆದಿದ್ದೆ ಆಯಿತು
ಕಥೆ ಅಲ್ಲಿಗೆ
ನಾನಾದೆ ಕಥೆಗಾರ
ಮನೆಯ ಆಗುಹೋಗುಗಳ
ನಟಿಸಿ ತೋರಿಸಿದೆ
ಅಷ್ಟೇ ನಾನಾಗಿದ್ದೆ
ಅಭಿನಯ ಚತುರ
ಅದಾವುದೋ ಪುಸ್ತಕದ
ಕುರಿತು ನಾ ಮಂಡಿಸಿದ
ಅಭಿಪ್ರಾಯಕೆ ಕರೆದರೆಲ್ಲಾ
ಖ್ಯಾತ ವಿಮರ್ಶಕ
ನೋಡಿಲ್ಲಿ ಹಿಡಿದಿದ್ದೇನೆ
ಹಾಳೆ ಲೇಖನಿ
ಪದಗಳೇ ಮೂಡದೆ
ನಾನಿಂದು ನಿಷ್ಪ್ರಯೋಜಕ
——————–
ತಿಲಕಾ ನಾಗರಾಜ್ ಹಿರಿಯಡಕ