ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ
ಚಿತ್ತಾರದ ಹೂಬನ
ಚಂದದ ಹಾದಿಯಿದು
ಆಯ್ದು ಕೊಂಡೆ ಇದನೆ
ಮನಸ್ಸ ಭಾವನೆ ಹಂಚಲು
ಸೊಗಸ ದಾರಿಯಿದು
ಮನಸ್ಸಿನ ಭಾವ ಬಿಚ್ಚಲು
ಆಕಾಂಕ್ಷೆಯ ಮಾತಿದು
ಖುಷಿಯಿದೆ ಇದರಲ್ಲಿ
ಸ್ಪೂರ್ತಿಯಿದೆ ಸಂಭ್ರಮವೂ
ಹಲವು ವಿಚಾರ ಬಣ್ಣಿಸಲು
ಹಗುರ ಮನಸ್ಥಿತಿಯು
ಅರಿಯದ ಗೌರವ ಇದರಲ್ಲಿ
ಪದದ ಭಾಷೆಯಲಿ
ವರ್ಣಿಸುವ ಆಲೋಚನೆಯಲಿ
ಎಲ್ಲ ಇದೆ ಪ್ರೀತಿಯಿದೆ
ಬಣ್ಣಿಸುವ ಪದದಲಿ
ಚಿತ್ತಾರದ ಹೂಬನ
ಕಲ್ಪನೆಯ ಮನ
ಅರಳುವ ಜಗತ್ತು
ಹಲವು ಹೊತ್ತು
ಹೊಸ ಹೊಸ ವಿಚಾರದ ಗತ್ತು
ಪದಗಳಲ್ಲಿರುವ ಸ್ವತ್ತು
ಕವಿಗಳಿಗೆ ಮಾತ್ರ ಗೊತ್ತು
ಗಾಯತ್ರಿ ಎಸ್ ಕೆ