ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್
ತಪ್ಪಿಲ್ಲದಿದ್ದರು ಸೋತು ಶೂಲಕ್ಕೆ ಏರುತ್ತಿದೆ ಮೌನ
ವಾಚಾಳಿಗಳ ಮುಂದೆ ಶಬ್ದಗಳೇ ಮರೆಯುತ್ತಿದೆ ಮೌನ
ಸ್ಮಶಾನದ ಹೊಸ್ತಿಲ ದಾರಿ ಸಾಗುತ್ತಿದೆ ಬದುಕು ಬೇಸರವಾಗಿ
ಮೋಹಬತ್ ಇಲ್ಲದ ಮುಖವಾಡಗಳಲ್ಲಿ ನರಳುತ್ತಿದೆ ಮೌನ
ಬೇವಿನ ಬೀಜ ಬಿತ್ತಿ ಮಾವಿನ ಹಣ್ಣು ಪಡೆಯಲಾದಿತೆ
ಅಸೂಯೆಯ ಬದುಕಲ್ಲಿ ಸಹಬಾಳ್ವೆ ಹುಡುಕುತ್ತಿದೆ ಮೌನ
ಬಣ್ಣದ ಮಾತುಗಳಲ್ಲಿ ಓಕುಳಿ ಆಡುತ್ತಿದೆ ಜನ ಜೀವನ
ಬಾಳಿನ ಭರವಸೆಗಳು ಬೆಂಕಿಯಲ್ಲಿ ದಹಿಸುತ್ತಿದೆ ಮೌನ
ಮುಳುಗಿದ ಸೂರ್ಯನಿಗೂ ನಾಳೆಯ ಉದಯದ ಚಿಂತೆ ಮಾಜಾ
ಬಂಧುಗಳನ್ನು ತೊರೆದು ಹಕ್ಕಿಯಂತೆ ಹಾರಲು ಮುಂದಾಗುತ್ತಿದೆ ಮೌನ
ಮಾಜಾನ್ ಮಸ್ಕಿ