ಕಿಡಿ ಕಿಡಿ ಕೆದರಿದಡೆ ಎನಗೆ ಹಸಿವು ತೃಷೆ ಅಡಗಿತೆಂದೆನು
 ಮುಗಿಲು ಹರಿದು ಬಿದ್ದಡೆ ಎನಗೆ ಮಜ್ಜನಕ್ಕೆರೆವೆಂಬೆನು
 ಗಿರಿ ಮೇಲೆ ಬಿದ್ದಡೆ ಎನಗೆ ಪುಷ್ಪ ವೆಂಬೆನು
 *ಚೆನ್ನಮಲ್ಲಿಕಾರ್ಜುನಯ್ಯ ಶಿರ ಹರಿದು ಬಿದ್ದಡೆ ಪ್ರಾಣ ನಿಮಗರ್ಪಿತವೆಂಬೆನು


12 ನೇ ಶತಮಾನದ ಶ್ರೇಷ್ಠ ಶರಣೆ ಅಕ್ಕ ಮಹಾದೇವಿಯು ಶಿವನ ಆರಾಧಕಿ ಅಂದರೆ ಶ್ರೀ ಚೆನ್ನಮಲ್ಲಿಕಾರ್ಜುನನ ಭಕ್ತೆ. ಆತನನ್ನು ಆರಾಧಿಸುವ ಆಧ್ಯಾತ್ಮವತಿ. ತನ್ನರಿವಿನ ನಿಜ ಸ್ಥಿತಿ ಅರಿವುವ ಅಕ್ಕಮಹಾದೇವಿಯವರ  ತನ್ನ ಜೀವನದಲ್ಲಿ ಏನೇನೋ ಘಟನೆ ನಡೆದಿಯೋ ಅದೆಲ್ಲ ತನ್ನ ಒಳ್ಳೇಯದಕ್ಕಾಗಿಯೇ ಎನ್ನುವ ಅರಿವಿನ ಜ್ಞಾನ ದಾತೆ ಅಕ್ಕಮಹಾದೇವಿಯವರ ನಿಲುವು ಅವರ ಗಟ್ಟಿ ನಿರ್ಧಾರ, ಎಂಥಹ ಪ್ರಸಂಗವೇ ಬರಲಿ ಎದುರಿಸುವ ಪ್ರಸಂಗವನ್ನು ಈ ಒಂದು ವಚನದಲ್ಲಿ ಅಕ್ಕಮಹಾದೇವಿಯವರು ಹೇಳುವರು

ಕಿಡಿ ಕಿಡಿ ಕೆದರಿದಡೆ ಎನಗೆ ಹಸಿವು ತೃಷೆ ಅಡಗಿತೆಂಬೆನು

ಕಿಡಿ ಕಿಡಿ ಬೆಂಕಿ ಬಿದ್ದರೆ ಆ ಕಿಡಿ ಕಿಡಿಯ ಬೆಂಕಿಯಿಂದ ನನ್ನ ಹಸಿವು ಬಾಯಾರಿಕೆ ಹೋಗುವುದು .ಎಂದು ಅಕ್ಕಮಹಾದೇವಿಯವರ ಈ ಒಂದು ವಚನದ ಅರ್ಥವು
ಈ ಜಗತ್ತಿನಲ್ಲಿ ಉರಿದು ಉರಿದುಕೊಳ್ಳುವ ಜನರ ಮಾತಿನ ಸಂಘರ್ಷಕ್ಕೆ ಇಳಿಯದೇ ಶಾಂತ ಚಿತ್ತರಾಗಿ, ಭಕ್ತಿಯಿಂದ ಶ್ರೀ ಚೆನ್ನಮಲ್ಲಿಕಾರ್ಜುನನನ್ನು ವಲಿಸಿಕೊಳ್ಳುವ ಪರಿಯನ್ನು ಅಕ್ಕ ಮಹಾದೇವಿಯವರು ಹೇಳುತ್ತಾರೆ .
ಕಿಡಿ ಕಿಡಿ ಬೆಂಕಿ ಬಿದ್ದರೇನು? ನಾ ನಡೆವ ದಾರಿಗೆ ಅದು ಒಳ್ಳೆಯ ಪಥವೇ ನನ್ನ ಹಸಿವನ್ನು ಹಾಗೂ ನನಗಾದ ಬಾಯಾರಿಕೆಯನ್ನು ಓಡಿಸುವ ಪರಿ ಅದು ಎಂದು ಹೇಳುವ ಅಕ್ಕನವರಲ್ಲಿರುವ ಮನ ಎಷ್ಟೊಂದು ಶಾಂತ ಸ್ವಭಾವ ಎಂದು ನಾವು ತಿಳಿದುಕೊಳ್ಳಬಹುದು .

 ಮುಗಿಲು ಹರಿದು ಬಿದ್ದರೆ ಮಜ್ಜನಕ್ಕೆರೆದೆಂಬೆನು

ಇಲ್ಲಿ ಮುಗಿಲು ಹರಿದು ಬೀಳುವುದೆಂದರೆ ಮಳೆ ಸುರಿಯುವುದು ಎಂದರ್ಥ.
ಚೆನ್ನಮಲ್ಲಿಕಾರ್ಜುನನನ್ನು ಹುಡುಕುವ ಪರಿಯಲ್ಲಿ ಏನೇ ಆಗಲೀ ,ಏನೇ ಬರಲಿ ಎಷ್ಟೇ ಕಷ್ಟ ಬಂದರೂ ಎದುರಿಸುವ ಧೈರ್ಯ. ಆ ಕಷ್ಟ ನಮ್ಮ ಮುಂದಿನ ಬದುಕಿಗೆ ಸೂಕ್ತ ವಾದ ಪಥ ಎನ್ನುವ ಅರ್ಥ.
ಮಳೆ ಧಾರಾಕಾರವಾಗಿ ಸುರಿದರೆ ,ನಾನು ಸ್ನಾನ ಮಾಡಿದಂತೆ ಎನ್ನುವರು ಅಕ್ಕ .

 ಗಿರಿ ಮೇಲೆ ಬಿದ್ದಡೆ ಎನಗೆ ಪುಷ್ಪವೆಂಬೆನು

ಈ ಬೆಟ್ಟ, ಗುಡ್ಡ, ಪರ್ವತ, ಗಿರಿಯು ನನ್ನ ಮೇಲೆ ಬಿದ್ದರೆ ಪುಷ್ಪ ಬಿದ್ದಂತೆ ಎನ್ನುವರು ಅಕ್ಕ.

 ಚೆನ್ನಮಲ್ಲಿಕಾರ್ಜುನಾ ಶಿರ ಹರಿದು ಬಿದ್ದಡೆ ಪ್ರಾಣ ನಿಮಗರ್ಪಿತವೆಂಬೆನು

ಹೇ ಚೆನ್ನಮಲ್ಲಿಕಾರ್ಜುನ ಎನ್ನ ತಲೆಯು ಕತ್ತರಿಸಿ ಬಿದ್ದರೆ ,ನನ್ನ ಉಸಿರು ನನ್ನ ಪ್ರಾಣವೇ ನಿಮಗೆ ಅರ್ಪಿತ ಆಯಿತು ಎಂಬುವೆನು ಎನ್ನುವರು ಅಕ್ಕ
________

 *ಅಕ್ಕಮಹಾದೇವಿಯವರ ವಚನ 13

ರತ್ನದ ಸಂಕೋಲೆಯಾದಡೆ ತೊಡರಲ್ಲವೆ?
 ಮುತ್ತಿನ ಬಲೆಯಾದಡೆ ಬಂಧನವಲ್ಲವೆ? ಚಿನ್ನದ ಕತ್ತಿಯಲ್ಲಿ ತಲೆಪೊಯ್ದಡೆ ಸಾಯದಿರ್ಪರೆ? ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಜನನಮರಣ ಬಿಡುವುದೆ ಚೆನ್ನಮಲ್ಲಿಕಾರ್ಜುನಾ?
———————————-

 ರತ್ನದ ಸಂಕೋಲೆಯಾದಡೆ ತೊಡರಲ್ಲವೇ ?

ರತ್ನ ದ ಬೇಡಿ ಹಾಕಿದರೇನು ಬೇಡಿ ಬೇಡಿಯೇ ತೊಂದರೆಯೇ ಆಗುತ್ತದೆ ಹೊರತು ಓ ನನಗೆ ರತ್ನದ ಬೇಡಿಯಿಂದ ಬಂದಿಸಿದರು ಎನ್ನುವುದು ನಿಜಕ್ಕೂ ಹಾಸ್ಯಾಸ್ಪದ ಸಂಗತಿ.ಯಾವ ಬೇಡಿಯಿಂದ ಬಂದಿಸಿದರೂ ಅದರಿಂದ ತೊಂದರೆಯೇ ಅದು ರತ್ನದ್ದು ಬೆಲೆಬಾಳುವಂಥದ್ದು ಎಂಬ ಕಾರಣಕ್ಕೆ ತೊಂದರೆ ಕೊಡುವುದಿಲ್ಲವೇ ? ಹಾಗೆ

 ಮುತ್ತಿನ ಬಲೆಯಾದಡೆ ಬಂಧನವಲ್ಲವೇ ?

ಯಾವ ಬಂಧನದಿಂದ ಬಂಧಿಸಿದರೇನು ಅದು ಸುಂದರವಾದ ಮುತ್ತಿನಿಂದ ತಯಾರುಮಾಡಿ ನಮ್ಮನ್ನು ಬಲೆಯಲ್ಲಿ ಕೂಡುಹಾಕಿದರೂ ಬಂಧನ ಬಂಧನವೇ ಓ ನಿನಗೆ ಎಷ್ಟು ಚಂದದ ಮುತ್ತಿನ ಹಾರದಲ್ಲಿ ನಿನ್ನನ್ನು ಬಂಧಿಸಿರುವರು ಎಂದು ತಿಳಿದು ಸಂಭ್ರಮವನ್ನು ವ್ಯಕ್ತಪಡಿಸಲಾಗುತ್ತದೆಯೇ ಬಂಧನ ಬಂಧನವೇ  ಅದೇ ರೀತಿ

 ಚಿನ್ನದ ಕತ್ತಿಯಲ್ಲಿ ತಲೆಪೊಯ್ದಡೆ ಸಾಯದಿರ್ಪರೆ ?

ಯಾವ ಅಲಗು ಚಿನ್ನದ್ದು ಆದರೇನು? ಚಿನ್ನದ ಕತ್ತಿ
 ತುಂಬಾ ಬೆಲೆಯುಳ್ಳದಾಗಿದೆ  .
 ಇದರಿಂದ ನಿನ್ನ ತಲೆಯನ್ನು ತೆಗೆಯುವೆ ಎಂದು  ಹೇಳಿದರೆ ಖುಷಿ ಪಡಲು ಆಗುವುದೇ ? ಆ ಆಯುಧಕ್ಕೆ ಕರುಣೆ ಬರುವುದೇ? ನಮ್ಮನ್ನು  ಸಾಯಸದೇ ಬಿಡುವುದೇ? ಚಿನ್ನದ ಕತ್ತಿಯಿಂದ ನಿನ್ನನ್ನು ಸಾಯಿಸುತ್ತೇನೆ ಎಂದರೇನು ?ಅದರಿಂದ ನಾವು ಬದುಕುತ್ತೇವೆಯೇ?
ಚಿನ್ನದ ಕತ್ತಿಯಲ್ಲಿಯೇ ತಲೆಯನ್ನು ಕತ್ತರಿಸಿದರೂ ಆತ ಸಾಯುವನೇ  ಹೊರತು ಬದುಕಿ ಉಳಿಯಲಾರ.

 ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಜನನ ಮರಣ ಬಿಡುವುದೇ ಚೆನ್ನಮಲ್ಲಿಕಾರ್ಜುನಯ್ಯಾ

ಈ ಭೂಮಿಯ ಮೇಲೆ ಹುಟ್ಟಿದವರು ಒಂದಿಲ್ಲೊಂದು ದಿವಸ ಸಾಯಲೇಬೇಕು. ಹುಟ್ಟು ಮತ್ತು ಸಾವು ಇವುಗಳಿಂದ ನಮಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ .
ಯಾವ ಭಜನೆ ಮಾಡಿದರೇನು ಭಗವಂತನನ್ನು ಎಷ್ಟು ಭಕ್ತಿ ಭಾವದಿಂದ ಪೂಜಿಸಿದರೇನು ?  ಈ ಲೌಕಿಕ  ಬಂಧನದಲ್ಲಿ ಸಿಲುಕಿದ ಭಕ್ತ ಮೋಕ್ಷ ಹೊಂದಲು ಸಾಧ್ಯವೇ? ದೇವರನ್ನು ಕಾಣಲು ಸಾಧ್ಯವೇ ? ಮಾನವ ಹುಟ್ಟು ಸಾವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ?
ಒಟ್ಟಿನಲ್ಲಿ
ಭಜನೆ ಮತ್ತು ಭಕ್ತಿಗಳು ಒಳ್ಳೆಯ ಹವ್ಯಾಸಗಳಾದರೂ ಕೇವಲ ಭಜನೆಯಲ್ಲಿ ಸಿಲುಕಿದವರಿಗೆ
ಲೌಕಿಕ ಬಂಧನದಲ್ಲಿ ಸಿಲುಕಿದ ಭಕ್ತನಿಗೆ ಮುಕ್ತಿಯನ್ನು ಆತ ಹುಟ್ಟು ಸಾವುಗಳಿಂದ ತಪ್ಪಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ ಎಂಬುದನ್ನು ಅಕ್ಕಮಹಾದೇವಿ ತಮ್ಮ ಒಂದು  ವಚನದಲ್ಲಿ ಈ ರೀತಿಯಾಗಿ ಹೇಳಿದ್ದಾರೆ


Leave a Reply

Back To Top