ಅನುವಾದ ಸಂಗಾತಿ
ತೆಲುಗುಮೂಲ: ದೇಶರಾಜು
ಕನ್ನಡಕ್ಕೆ: ಕೊಡೀಹಳ್ಳಿ ಮುರಳೀ ಮೋಹನ್
‘ಬಿಳಿಯಾದವೆಲ್ಲಾಆಕಳುಗಳಲ್ಲ’
ಕಾಲ ಬದಲಾಗಿದೆ,
ಕಾಲದ ಕೊಂಡಿಗೆ ಸಿಕ್ಕಿದ ದೃಷ್ಟಿ ಬದಲಾಗಿದೆ
ಇವಾಗ ತಾಯಿ ಯಾರಿಗೂ ತಾಯಿ ಆಗಿಲ್ಲ
ಹಾಲು ಕುಡಿದು ಬೆಳೆದ ಪ್ರತಿಯೊಬ್ಬ
ಮಾನವನಾಗದಂತೆ
ಬಾಲವೆತ್ತಿ ಕೆಚ್ಚಲನ್ನು ಗುಮ್ಮುವ ಪ್ರತಿಯೊಂದು ಕರುವು
ನಾಳೆ ಗೋಮಾತೆಯಾಗಿ
ರಕ್ತ ಹರಿಸುವುದಿಲ್ಲ ಯನ್ನುವ ಭರವಸೆ ಇಲ್ಲ.
ಹೀನಸ್ತರೆಲ್ಲಾ ಶೂನ್ಯತೆಯನ್ನು ಜೋಡಿಸಿ
ಸೃಷ್ಟಿಗೆ ಹೊಸ ಅರ್ಥ ನೀಡುತ್ತಿದ್ದರೇ
ಆಡಿ ಕಾರಿನ ಕನ್ನಡಿಗಳಲ್ಲಿನ ತಾಯ್ತನ
ಯಾವ ಹೆಂಗಸಿನ ಮಾನಕ್ಕೂ ಭರವಸೆ ನೀಡುವುದಿಲ್ಲ
ಹುಲ್ಲು ತಿನ್ನುವ ಎಲ್ಲಾ ಪ್ರಾಣಿಗಳು ಪ್ರಾಣಿಗಳೇ ಆಗಿದ್ದಾಗ –
ಗೋವು ಒಂದನ್ನೇ ಏಕೆ ಪೂಜಿಸಬೇಕೆಂದು ಯಾರೂ ಹೇಳುವುದಿಲ್ಲ
ಗೋಧೂಲಿ ಯನ್ನ ವಿಬೂದಿಯಾಗಿ ಹಚ್ಚಿಕೊಳ್ಳುವನು ಯಾರೂ
ಗೋವಿನ ಕುತ್ತಿಗೆ ಯನ್ನು ನಿಮಿರುವ ಪಾಪಕ್ಕೆ ಹೋಗುವುದಿಲ್ಲ
ಹಾಲು ಕೊಟ್ಟು ಹಿಂತಿರುಗಿದ ಬಿಳಿ ಹಸು
ಆಳುವ ಹುಲಿ ಜೊತೆ ಸೇರಿದೆ ಎಂದು –
ಗೊರಸುಗೆ ಅಂಟಿದ ರಕ್ತವ ಚುಕ್ಕೆಗಳೂ ಸಾಕ್ಷ್ಯ ಹೇಳುವುದಿಲ್ಲ
ಕಾಲ ಬದಲಾಗಿದೆ,
ಬಿಳಿಯದೆಲ್ಲಾ ಹಸು ಅಲ್ಲ
ಕರಿಯದಾಗದ್ದೆಲ್ಲಾ ಹಾಲೂ ಅಲ್ಲ.
ತೆಲುಗುಮೂಲ: ದೇಶರಾಜು
ಕನ್ನಡಾನುವಾದ: ಕೊಡೀಹಳ್ಳಿ ಮುರಳೀ ಮೋಹನ್