ಗಾಯತ್ರಿ ಎಸ್ ಕೆ ಅವರ ಕವಿತೆ-ಬದುಕು

ಬದುಕೊಂದು ಕಾಣಿಕೆ
ಸರಿಯಾದ ರೀತಿಯಲ್ಲಿ
ಬಳಸು ಅದಕ್ಕೆ

ಅಹಂಕಾರವೇತಕೆ
ನಿನಗೆ.. ಇಷ್ಟ ಪಟ್ಟು
ಇರು ಸುಮ್ಮನೆ ಅದಕ್ಕೆ

ಬೇಕಿದ್ದೆಲ್ಲ ಸಿಗುವುದಿಲ್ಲ
ಸಿಕ್ಕಿದ್ದು ಬಿಡುವುದೂ ಅಲ್ಲ
ಯೋಚನೆಯ ತರವೇತಕೆ

ಕಂಡಿದ್ದೆ ಕಾಣುವುದು
ನೋಡಿದ್ದೆ ನೋಡುವುದು
ನೋಟುಗಳ ಆಟವಿದು

ಬಲ್ಲೀದ ಸನ್ನಿಧಾನವಿದು
ನಿರಂತರ ಹುಡುಕಾಟ
ಸಾದ್ಯಂತ ಪರದಾಟ

ಏಕತೆಯ ಬಹುಮಾನ
ನಮಗಿಲ್ಲಿ ಸಮ್ಮಾನ
ಚದುರಂಗ ಆಸಮಾನ

ಬಯಸುವ ಹೃದಯ
ಬಯಸಿದಂತೆ
ಬಳಕೆಯಂತೆ ಇರು
ಮನಸ್ಸೂ ಸಮಾಧಾನ..!


Leave a Reply

Back To Top