ಸಿದ್ಧರಾಮ ಹೊನ್ಕಲ್ ಶಾಂತರಸರಂತೆ ಈ ಭಾಗಕ್ಕೆ ಸಾಹಿತ್ಯಿಕ ನ್ಯಾಯ ಒದಗಿಸಲು ಹೋರಾಡುತ್ತಾರೆ. — ಸಚಿವ‌ ದರ್ಶನಾಪುರ.

 ಶಾಂತರಸರ ಜನ್ಮ ಶತಮಾನೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಸಣ್ಣ ಕೈಗಾರಿಕಾ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಅವರು‌ ಇಂದು‌ ಶಹಾಪುರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಕಲಾನಿಕೇತನ ಟ್ರಸ್ಟ್ ಶಹಾಪುರ ಸಂಘಟಿಸಿದ ಕಾರ್ಯಕ್ರಮ ದಲ್ಲಿ‌ ಶಾಂತರಸರ ಬದುಕು ಬರಹ ಹೋರಾಟ ಮಾದರಿ ಆಗಿದೆ ಎಂದರು. ಅವರು ಲೇಖಕ ಸಿದ್ಧರಾಮ ಹೊನ್ಕಲ್ ಅವರ  ನಿನ್ನ ಜೊತೆ ಜೊತೆಯಲಿ.. ಗಜಲ್ ಕೃತಿ ಲೋಕಾರ್ಪಣೆ ಮಾಡಿ ಸಿದ್ಧರಾಮ ಹೊನ್ಕಲ್ ಶಾಂತರಸರಂತೆ ಹೋರಾಟದ ಜೀವಿ.ಅವರು‌ ಬೆಂಗಳೂರು ಮೈಸೂರು ಕಡೆ ಇದ್ದರೆ ತುಂಬಾ ಖ್ಯಾತಿ ಪಡಿತಾ ಇದ್ದರು.ಅವರು ಇಲ್ಲಿರೊದರಿಂದ ಹೆಚ್ಚು ಖ್ಯಾತಿ ಹೊಂದಲಾಗಿಲ್ಲ. ನಮ್ಮ ಭಾಗದ ಜನ‌ ಅಸೂಯೆ ಹಾಗೂ ಸಣ್ಣತನದಿಂದ ಕಾಲು ಎಳೆಯುವ ಕೆಲಸ ಮಾಡುವುದರಿಂದ ತಾವು ಮುಂದೆ ಹೋಗಲ್ಲ.ಹೋಗುವವರಿಗೆ ಬಿಡುವುದಿಲ್ಲ. ಸಿದ್ಧರಾಮ ಹೊನ್ಕಲ್ ನಮ್ಮ ಭಾಗದ ಅಷ್ಟೇ ಅಲ್ಲ ಈ ನಾಡಿನಲ್ಲಿ ಚಿರಪರಿಚಿತ ಆದ ಲೇಖಕ ಆಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಬಹುದು. ಅವರಿಗೆ ಅವರ ಶ್ರಮಕ್ಕೆ ಅಕಾಡೆಮಿ ಸದಸ್ಯತ್ವ ತೀರಾ ಸಣ್ಣದು. ಅವರಿಗೆ ಉಜ್ವಲ ಭವಿಷ್ಯ ಕಾದಿದೆ.ಇವರು ಕೂಡಾ ಶಾಂತರಸರಂತೆ ಈ ಭಾಗದ ಸಾಹಿತಿಗಳಿಗೆ ನ್ಯಾಯ ಒದಗಿಸಲು ಹೋರಾಡುತ್ತಾರೆ.. ಎಂದು ಅಭಿನಂದಿಸಿ ಮಾತನಾಡಿದರು.

ವೇದಿಕೆಯಲ್ಲಿ ಲೋಕಾರ್ಪಣೆಯಾದ ಗಜಲ್ ಕೃತಿ ಕುರಿತು ಹಾಗೂ ಶಾಂತರಸರ‌ ಕಥೆ ಕಾದಂಬರಿ ಕುರಿತು ಕಥೆಗಾರ ಮಹಾಂತೇಶ ನವಲಕಲ್ ಅರ್ಥಪೂರ್ಣವಾಗಿ ಮಾತನಾಡಿದರು. ಅವರು ಹೊನ್ಕಲ್‌ ರ ಗಜಲ್‌ ಒಂದನ್ನು ಉಲ್ಲೇಖಿಸಿ ಬಹು‌ ಸುಂದರ ಗಜಲ್ ಕಾವ್ಯ ಇವಾಗಿವೆ.ಅಣ್ಣ ಸಿದ್ಧರಾಮ ಹೊನ್ಕಲ್ ರು ಬರೆದ ಗಜಲ್ ಬಗೆಗಿನ ಆರಂಭದ ಪರಿಚಯ ಓದಿದವರೆಲ್ಲ ಗಜಲ್ ಕಾವ್ಯ ರಚಿಸಬಹುದು.ಅಷ್ಟು ಚೆಂದಾಗಿ ಸರಳವಾಗಿ ಶಾಂತರಸರಂತೆಯೇ ಇವರು ಸರಳವಾಗಿ,ಒಂದೇ‌ ಓದಿಗೆ ಅರ್ಥವಾಗುವಂತೆ ಬರೆದಿದ್ದಾರೆ.ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ನಮ್ಮ ಈ ಸಿದ್ರಾಮಣ್ಣ ಎಂದು ಅವರ ಎಲ್ಲಾ ಗಜಲ್ ಗಳು ಎಲ್ಲರೂ ಓದಬೇಕೆಂದು ಕರೆ ನೀಡಿದರು.

ರಂಗಾಯಣ ಕಲಬುರ್ಗಿಯ ನೂತನ ನಿರ್ದೇಶಕರಾದ ಡಾ.ಸುಜಾತ ಜಂಗಮ ಶೆಟ್ಟಿ ಅವರು ಶಾಂತರಸರ ಬದುಕು ಬರಹ ಕುರಿತು,ಬಸವಪ್ರಭು ಹೆಂಬಿರಾಳ ಅವರು ಶಾಂತರಸರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೊಡುಗೆ ಕುರಿತು ಅರ್ಥಪೂರ್ಣವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಸಾಪ ಅಧ್ಯಕ್ಷ ಡಾ.ರವೀಂದ್ರ ಹೊಸಮನಿ, ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಅಯ್ಯಣ್ಣ ಇನಾಮದಾರ ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಸಿದ್ಧರಾಮ ಹೊನ್ಕಲ್ ಅವರು ಮಾತನಾಡಿ,
ಕನ್ನಡಕ್ಕೆ ಉರ್ದವಿನಿಂದ ಶಾಂತರಸರು ಗಜಲ್ ಕಾವ್ಯ ಪ್ರಕಾರವನ್ನು ತಂದರು.ಗಜಲ್ ಎಂಬುದು ಪ್ರೇಮಕಾವ್ಯ. ಅದನ್ನು ಕಾವ್ಯದ ರಾಣಿ ಎನ್ನುತ್ತಾರೆ.ಅದು ಗಂಡು ಹೆಣ್ಣಿನ ಮಧುರ ಭಾವಗಳನ್ನು, ನೋವು, ಹತಾಶೆ‌ ದು:ಖ ,ವಿರಹವನ್ನು, ಸಂತಸವನ್ನು ಕಟ್ಟಿಕೊಡುವ ಒಂದು ಕಾವ್ಯ ಪ್ರಕಾರವಾಗಿದೆ. ಎರಡು ಮನಸುಗಳ ಪಿಸುಮಾತಿನ‌ ಕಾವ್ಯವಾಗಿದೆ. ಈಗೀಗ ಈ ಕಾವ್ಯ ಪ್ರಕಾರದಲ್ಲಿ ಸಹ ವರ್ತಮಾನದ ತಲ್ಲಣಗಳ ಕುರಿತು ಸಮಾಜಮುಖಿ ಆಶಯಗಳ ಕುರಿತು ಕಾವ್ಯ ರಚನೆ ಆಗುತ್ತಿದೆ.ಕನ್ನಡದಲ್ಲಿ ಈಗ ನನ್ನನ್ನು ಒಳಗೊಂಡಂತೆ ಮುನ್ನೂರಕ್ಕೂ ಹೆಚ್ಚು ಜನ ಗಜಲ್ ಕಾವ್ಯ ಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ. ನೂರಾರು ಕೃತಿಗಳು ಬಂದಿವೆ.ಇಂದು ಮಾನ್ಯ ಸಚಿವರು ನನ್ನ ಈವರೆಗಿನ ಸಮಗ್ರ ಗಜಲ್‌ ಗಳ ಸಂಕಲನ *ನಿನ್ನ ಜೊತೆ ಜೊತೆಯಲಿ.. ಲೋಕಾರ್ಪಣೆ ಮಾಡಿರುವುದು ಅತ್ಯಂತ ಸಂತಸ ತಂದಿದೆ. ಅವರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರೇಮಿಗಳು ಆಗಿರೋದ್ರಿಂದ ಅವರಿಂದ ಲೋಕಾರ್ಪಣೆ ಮಾಡಿಸಿದ್ದು ಹೆಮ್ಮೆ ಅನಿಸಿದೆ ಎಂದರು. ಇಡೀ ಹೈದ್ರಾಬಾದ್ ಕರ್ನಾಟಕ ದ ಲೇಖಕರಿಗೆ ಅವಕಾಶ ಸಿಗಬೇಕು ಎಂದು ಹೋರಾಟ ಮಾಡಿದವರು ಶಾಂತರಸರು. ಅವರ ಜನ್ಮ ಶತಮಾನೋತ್ಸವದದ ಈ ಕಾರ್ಯಕ್ರಮದಲ್ಲಿ ಗಜಲ್ ಕೃತಿ ಲೋಕಾರ್ಪಣೆ ಆದುದೂ ಅವರ ಆತ್ಮಕ್ಕೆ ಶಾಂತಿ ನೀಡಲಿದೆ ಎಂದು ಗಜಲ್ ಕಾವ್ಯ ಪ್ರಕಾರದ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು.*

 ಕಾರ್ಯಕ್ರಮವನ್ನು ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರು ಅವರು ಆರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಹುಚ್ಚರ ಮಧ್ಯೆ ಇದ್ದಾಗ ಹುಚ್ಚರಂತಿರಬೇಕು ನೀ ತಿಳಿ
ಬುದ್ದಿವಂತರ ಮಧ್ಯೆಯು ಮುಗ್ಧರಂತಿರಬೇಕು ನೀ ತಿಳಿ

ಜಗದಿ ಪರರ ನಂಬರು ನೆಚ್ಚರು ಸಂತಸವೇ ಪಡರು
ಇಂತಿಪ್ಪ ಜನಗಳಲಿ ಮೌನವಾಗಿರಬೇಕು ನೀ ತಿಳಿ

ಮೂರ್ಖರೂ ತಮ್ಮದೇ ಜಂಬ ಅಹಂಕಾರದಲ್ಲಿ ತಾವಿರುವರು
ಹಿಂದೊಂದು ಮುಂದೊಂದು ಆಡದವರಿರಬೇಕು ನೀ ತಿಳಿ

ತಮ್ಮಂತೆ ಪರರ ಬಗೆವವರೆ ಬಹಳ ಈ ಲೋಕದಿ
ಸಹಜ ಧೀಮಂತಿಕೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ನೀ ತಿಳಿ

ಬೆಳೆದವರ ಕಂಡು ಖುಷಿ ಪಡೋರು ಕಡಿಮೆ ಹೊನ್ನು’
ಹರಿವ ನದಿಯಂತೆ ಕೊಚ್ಚೆ ಕೊಳೆ ಸೈರಿಸಬೇಕು ನೀ ತಿಳಿ


One thought on “ಸಿದ್ಧರಾಮ ಹೊನ್ಕಲ್ ಶಾಂತರಸರಂತೆ ಈ ಭಾಗಕ್ಕೆ ಸಾಹಿತ್ಯಿಕ ನ್ಯಾಯ ಒದಗಿಸಲು ಹೋರಾಡುತ್ತಾರೆ. — ಸಚಿವ‌ ದರ್ಶನಾಪುರ.

  1. ಸಚಿವರು ಸೂಕ್ತವಾದ , ಸಮಂಜಸವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

Back To Top