ಸವಿತಾ ದೇಶಮುಖ ಅವರ ಕವಿತೆ ‘ನುಲಿಯುತ್ತಿದೆ ಬೀಜ’

ಅಬ್ಬರಿಸಿತು ಬ್ರಹ್ಮಾಂಡವು
ಸೀಳಿ ನಿಬ್ಬೆರಗಿನಲಿ
ವೈಷಮ್ಯ -ಮತ್ಸರಗಳ
ವೈ ಮನಸ್ಸಿನ-ತಾಂಡವದಲ್ಲಿ

ಧರೆ ಹೊತ್ತಿ -ಉರಿಯಲ್ಲಿ
ಕರಕಲಾಗಿ ನಲುಮೆಯ ಭಾವವು
ಬೂದಿಯಾಗಿ ತಾರತಮ್ಯದಲಿ
ಮತಭೇದದ ಬಡಿದಾಟದಲ್ಲಿ…

ಕೆಂಡಮಂಡಲಾದ ಬೇಗೆಯಲ್ಲಿ
ಸುಧೇಯು ನೊಂದಳು
ದ್ವೇಷದ ಕತ್ತಲೆಯ ಅಂದಕಾರದಲ್ಲಿ
ಸಿಡಿದೆದು ಬಿರುಗಾಳಿ ಬೀಸಿದಳು

ಗಿಡಮರಗಳು ಕಿತ್ತೆಸೆದು
ಹಾರಿಯತ್ತರಕ್ಕೆ ಅಪ್ಪಳಿಸಿದವು
ನೆಲಕ್ಕೆ ..ವೈಷೈಮ್ದ ದಾಟಿಗೆ
ಸಂಹರಣವ ಅಂತ್ಯವ ಗೊಳಿಸಲು…

ಕ್ರೋಧ ಮನಗಳ ಅಟ್ಟಹಾಸದ
ಗಾಳಿಯ ದಾಳಿಗೆ ಹಾರಿದವು,
ಶಾಂತಿ ವೃಕ್ಷದ ಬಲಿತ ಬೀಜವು
ಅದೆಲ್ಲೋ ನುಸುಳಿ ಭೂಮಿಯ…

ಗರ್ಭದಲ್ಲಿ ಅವಿತು ಕುಳಿತಾವು
ತಾಯಿ ಮನೆಯ ಆಸರೆಯಲಿ
ಮತ್ತೆ ನಲಗುವ ಹುಮ್ಮಸದಲಿ
ಸುರಕ್ಷತೆಯ ಭಾವದಲ್ಲಿ…

ಸುವಿಚಾರದ ಚಿಗುರೊಡೆದು
ತ್ಯಜಿಸಿ ದಂಡತ್ವದ ಭಾವವ
ಶಾಂತಿ ನೆಮ್ಮದಿಯಲ್ಲಿ
ಮತ್ತೆ ಬೀಜವು ನುಲಿಯಲು….


Leave a Reply

Back To Top