ಗಝಲ್

ಜಯಶ್ರೀ.ಜೆ. ಅಬ್ಬಿಗೇರಿ

ಬೀಳುಗಳಲ್ಲೇ ಬೀಳುವುದಕ್ಕಿಂತ ಬೀಳುಗಳಿಂದ ಮೇಲೇಳುವುದು ಮೇಲು
ಆಸೆ ಹೊತ್ತ ಮನಗಳಿಗೆ ದಾರಿ ತಪ್ಪಿಸುವುದಕ್ಕಿಂತ ದಾರಿಯಾಗುವುದು ಮೇಲು

ನೆರೆಮನೆಯ ಗೋಡೆಗಳಿಗೆ ಕಿವಿಯಾಗುವುದಕ್ಕಿಂತ ಮನಗಳಿಗೆ ಕಿವಿಯಾಗುವುದು ಮೇಲು
ಇತರರ ನೋಡಿ ನಗುವುದಕ್ಕಿಂತ ಇತರರ ಕೂಡಿ ನಗುವುದು ಮೇಲು

ಗಾಳಿಗೆ ಮಾತೆಸೆದು ಇರಿಯುವುದಕ್ಕಿಂತ ಮಸಿಯಾಗಿಸದೇ ಹಸಿರಾಗಿಸುವುದು ಮೇಲು
ಅಳೆದಳೆದು ಆಳುವುದಕ್ಕಿಂತ ಆಳಾಗಿ ಅರಸನಾಗುವುದು ಮೇಲು

ನಿನ್ನ ಕೊಲುವೆ ಗೆಲುವೆ ಎನ್ನುವದಕ್ಕಿಂತ ಒಲವೇ ಗೆಲುವೆಂಬುದು ಮೇಲು
ತುಳಿದು ಬೆಳೆಯುವುದಕ್ಕಿಂತ ಬೆಳೆಯುತ್ತ ಬೆಳೆಸುವುದು ಮೇಲು

ಅತ್ತು ಸತ್ತು ಬೇಸತ್ತು ಬದುಕುವುದಕ್ಕಿಂತ ಸತ್ತ ಮೇಲೂ ಬದುಕುವುದು ಮೇಲು
ಮಣ್ಣಲ್ಲಿ ಮಣ್ಣಾದ ಮೇಲೂ ಜನರ ಹಲ್ಲಿನಲ್ಲಿರುವುದಕ್ಕಿಂತ ನಾಲಿಗೆಯಲ್ಲಿರುವುದು ಮೇಲು

**************

13 thoughts on “ಗಝಲ್

    1. ಗ್ರಹಿಸಿ ಪ್ರತಿಕ್ರಿಯಿಸಿದ ಹೂ ಮನದ ತಮಗೆ
      ಧನ್ಯವಾದಗಳು

  1. ಅತೀ ಸುಂದರ ರಚನೆಗಳು.. ಬಹು ಮುಖ್ಯ ಆಲೋಚನೆಗಳು… ಧನ್ಯವಾದಗಳು…

Leave a Reply

Back To Top