ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವಳದು ಚಿಗುರುವ ಕನಸು
ಅವನದು ಚಿಗುರಿದ ಮನಸು
ಅವಳು ಚಿಗುರೊಡೆದ ಬಳ್ಳಿ
ಅವನು ಬರಸೆಳೆವ ಮರ
ಅವಳು ಚಿಗರೆಯಂತೆ ಚಕೋರಿ
ಅವನು ಚಿಗುರುಮೀಸೆಯ
ಚಕೋರ
ಅವಳು ಕಾಣದ ಭಕ್ತಿಯ ಸ್ಟರೂಪ
ಅವನು ತಲ್ಲಣದ ಹುಡುಕಾಟ
ಅವಳು ತಾಳಿ ತಪಸ್ವಿಯಾದವಳು
ಅವನು ತಪವಗೈದು ತಪೋಋಷಿ
ಅವಳದು ಚಿಗುರೊಡೆಯುವ ಮುಗ್ಧ ಮನಸು
ಅವನದು ಚಿವುಟಿಹಾಕುವ ಚೋದ್ಯಮನಸು
ಅವಳು ಚಿರಂತನ ಚಿನ್ಮಯಿ
ಅವನು ಚಿರಂತನ ಚಿದ್ಸ್ವರೂಪಿ
ಅವಳು ತಲ್ಲಣ ತವಕಗಳಿಗೆ ಸಹನೆಯ ಸ್ಟರೂಪ
ಅವನು ಪಂಚೇಂದ್ರಿಯಗಳ ಪರಮ ಭಕ್ತ
ಅವಳು ಭಾವನೆಗಳ ತೋರಣಕಟ್ಟಿದವಳು
ಅವನು ಬಾಹು ಬಂಧನ ಕಟ್ಟಿದವನು.


About The Author

1 thought on “ಲಲಿತಾ ಪ್ರಭು ಅಂಗಡಿ ಅವರ ಕವಿತೆ-ಅವನು ಅವಳು”

Leave a Reply

You cannot copy content of this page

Scroll to Top