ಕಾವ್ಯ ಸಂಗಾತಿ
ಎಸ್ ಎಸ್ ಜಿ ಕೊಪ್ಪಳ
ತಪೋಧನ:——–
ಕನ್ನಡಿಯು ನಿನ ಕಣ್ಣು,
ಹೊನ್ನುಡಿಯು ನಿನ ಮಾತು.
ಕಣ್ಣ ಕನ್ನಡಿಯಲಿ ನೀ. ತುಂಬಿರಲು ಬೇರೇನು ಕಾಣಲು
ಸಾಧ್ಯ ನಿನ ಹೊರತು.
ಮನದ ಬಿಂದಿಗೆಯದು
ತುಳುಕಿರಲು ನಿನ
ಒಲವ ಸುಧೆಯಲಿ ಬೇರೆಯದಕೆ.
ಜಾಗವೆಲ್ಲಿಹುದು.?
ಮನದಿ ನಿನದೇ ಧ್ಯಾನ
ನಿನದೇ ಮೌನ.
ನೀನೇ ಈ ಬಾಳ ಇನ.
ನಾನಾಗಿರೆ ಅಂಬುಜ ನೀನು
ಬರುವೆ ನನ ಮೌನ
ಮುರಿವ ತಪೋಧನ.
ನಾಬಿಂಬನೀಪ್ರತಿಬಿಂಬ
ಹಾಡು ನೀನು ರಾಗ ನಾ
ಮನದ ಭಾವ ನೀ,
ಗೀತೆ ನಾ ಆಗಿಸುಂದರ.
ಹಕ್ಕಿಯ ಹಾಡು ನೀನು
ಮಧುರ ಕಲರವ ನಾ,
ಹೂವಿನ ಘಮ ನೀನು
ಕುಸುಮಸೌಂದರ್ಯ ನಾನು.
ತನು ಮನ ಧನ ನಿನದು
ನೀ ಘನತೆ ಗೌರವದ ಕಾಯಕಲ್ಪ
ಚರಣ ಹರಣ ಮರಣ
ಸರ್ವವೂ ನಿನದೇ ಋಣ.
ಎಸ್ ಎಸ್ ಜಿ ಕೊಪ್ಪಳ
ಕನ್ನಡವಿಯು ನಿನ ಕಣ್ಣು
ಸೂಪರ್ ಮೇಡಂ
ಧನ್ಯವಾದಗಳು