ಕಾವ್ಯ ಸುಧೆ. ( ರೇಖಾ )ಕವಿತೆ-‘ಎತ್ತಣ ಮಾಮರ ಎತ್ತಣ ಕೋಗಿಲೆ’

ಎತ್ತಣದ ಮಾಮರ ಮತ್ತೆಲ್ಲಿಯದೋ ಕೋಗಿಲೆ
ಮಾಮರ ಕೋಗಿಲೆ ನಡುವೆ ಋತುವಿನ ನಂಟು !
ಎಲ್ಲಿಯ ನದಿ ಮತ್ತೆಲ್ಲಿಯೋ ಇರುವ ಕಡಲಿನಲೆ 
ಸಾಗುತಲಿ ಒಂದಾಗಿಸಿದ್ದದು ಹಂಬಲದ ನಂಟು !

ಎಲ್ಲಿ ಅಕ್ಕಾ ಎಲ್ಲಿಯ ಚನ್ನಾಮಲ್ಲಿಕಾರ್ಜುನನಲಿ
ಒಂದಾಗಿಸಿದ್ದದು ಭಕ್ತಿಯ ಪರಕಾಷ್ಟೆಯ ನಂಟು !
ದೇಹ ಮನಸನು ಮೀರಿ ಸತ್ ಚಿತ್ ಆನಂದದಲಿ
ಲೀನವಾಗಿಸಿದ್ದದು ಆತ್ಮ ವಿಚಾರದ ಗಂಟು !

ಸಿದ್ದೇಶ್ವರನ ಮುಡಿಯೇರಿ ಎಲ್ಲಿಯದೊ ಸಂಪಿಗೆ 
ಹೆಸರನೊಂದಾಗಿಸಿದ್ದು ಹೂವು ನಾರಿನ ನಂಟು !
ಅರಳವುದೆಲ್ಲಿಯೋ ಪರಿಮಳದಿ ಸೂಜು ಮಲ್ಲಿಗೆ
ಮಾದೇಶನ ಶಿರವೇರುವ ಸೋಜಿಗದ ನಂಟು..!

—————————————-

Leave a Reply

Back To Top