ವ್ಯಾಸ ಜೋಶಿ ಅವರ ತನಗಗಳು

ಮುಗಿಲ ಕಡೆ ನೋಡಿ
ಹೂವೊಂದು ಹಲುಬಿತು,
ಓ ಮೇಘ, ದೂತನಾಗು
ದುಂಬಿಯ ಕಳುಹಿಸು.
**
ಮೇಘ ಗುಡುಗಿದಾಗ
ಮಿಂಚಿನ ಬೆಳಕಲಿ,
ಗರಿಬಿಚ್ಚಿ ಕುಣೀತು
ಮಳೆಗಾಗಿ ನವಿಲು.
*
ರವಿಯ ಮರೆಮಾಡಿ
ಕತ್ತಲೆಯ ಮಿಂಚಲ್ಲಿ
ಮಳೆ ಬರುವದೆಂದು
ಗರ್ಜಿಸಿದ ಮೇಘವು.
**
ಹಗಲ್ಗತ್ತಲೆ ಮಾಡಿ
ಆರ್ಭಟಿಸಿ ಗುಡುಗಿ,
ಧರೆಗಿಳಿದ ಮೇಘ
ಕೊನೆಗೊಮ್ಮೆ ಕರಗಿ.

ಧರಣಿಯ ದಾಹವ
ತಣಿಸಿದ ಮೇಘಕೆ,
ಹೂವು -ಹಣ್ಣು ಕೊಟ್ಟಿದ್ದು
ಭೂಮಿಯ ಕೃತಜ್ಞತೆ.
**
ಅನ್ನ ವಸ್ತ್ರ ಹಣವ
ಎಲ್ಲವ ವೃದ್ಧಿಸುವ,
ಜಗವೊಂದು ಕಣಜ
ಮಾಲೀಕ ಮೇಘರಾಜ.

Leave a Reply

Back To Top