ಕಾವ್ಯ ಸಂಗಾತಿ
ಡಾ ಸಾವಿತ್ರಿ ಮಹಾದೇವಪ್ಪ
ಲಿಂಗ ಧ್ಯಾನ
ಗಂಡ ಎನ್ನುವ ಗಂಡಾಂತರ
ಗಢಗಢ ನಡುಗುತ್ತಿದೆ ಭೂಮಿ
ಉಕ್ಕಿ ಹರಿದ ಲಾವಾರಸ
ಉಗುಳುತ್ತಿವೆ ಕೆಂಡ
ಅಲ್ಲಿ ಇಲ್ಲಿ ಮನೆ ಮನದಲ್ಲಿ
ಹೀಗೆ ಹರಿದು ನಡೆದಳು
ಹಂಗಿನರಮನೆಯ ತೊರೆದ ಅಕ್ಕ
ಹುಡುಕುವಳು ಮಾತಿಲ್ಲದ ಮೂಕ
ರೋದನದ ಪಕ್ಷಿ ಸಂಕುಲಕೆ
ಶರಗೊಡ್ಡಿ ಕಂಡಿರೇನ ?ನನ್ನ
ಆರಾಧ್ಯ ದೈವದ ಅರಿವಿನ
ಗುರುವನ್ನು
ಕಟ್ಟಿಕೊಂಡಿರುವೆ
ಬಾಳೆಂಬ ಬಟ್ಟೆಯಲಿ
ಹಸಿವು ನಿದ್ರೆಯ ಹಂಗಿಲ್ಲದ
ಸಾವಿಲ್ಲದ ಕೆಡಿಲ್ಲದ
ನನ್ನೊಲವ ಗಂಡನನು
ಹಗಲಲ್ಲ ಇರುಳು
ಇರುಳಲ್ಲ ಹಗಲು
ಸಂಚರಿಸುತ್ತಿದೆ ಮನ
ಹುಟ್ಟು ಸಾವಿನ ಅರಿವಿನ
ಪಯಣ
ಅಂತರಂಗ ಪ್ರವೇಶಿಸುವ
ಕಾಯ ಪಯಣ
ಜ್ಞಾನವೆಂಬ ಬೆಳಕಿನ ದರ್ಶನ
ಪಡೆಯುವೆ ಶರಣರ
ಶರಣರ ಶಿವಯೋಗ
ಲಿಂಗ ಧ್ಯಾನ
ಡಾ ಸಾವಿತ್ರಿ ಮಹಾದೇವಪ್ಪ
Beautiful poem