ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಬಂಧಿಸಿಡಬೇಡ

ಭಾವನಾ ಲೋಕದಲ್ಲಿ
ಸುಮ್ಮನೆ ಬಂಧಿಸಿಡಬೇಡ
ಪ್ರೀತಿಯ ತೋರುತ
ಮುದ್ದಿಸದೆ ಇರಬೇಡ
ಮಾತು ಮಾತಿನಲ್ಲೇ
ಸಮಯವ ಕಳಿಬೇಡ
ಈ ಸಮಯ ಮತ್ತೆ ಮರಳಿ
ಸಿಗದು ಎನ್ನುವುದ ಮರಿಬೇಡ
ಜೀವನವಿಡೀ ಪರಿತಪಿಸುತ್ತ
ಮರುಗುತ್ತ ಕುಳ್ಳಬೇಡ
ನೋವಾಗಲಿ ನಲಿವಾಗಲಿ
ಯವುದೂ ಶಾಶ್ವತ ಅಂತ ತಿಳಿಬೇಡ
ಖುಷಿಯ ಸವಿ ಕ್ಷಣಗಳ ಮರಿಬೇಡ
ಕಷ್ಟಕ್ಕೆ ಹೆದರಿ ಧೈರ್ಯಗೆಡಬೇಡ
ಯಾವುದಕ್ಕೂ ಅತಿಯಾಗಿ
ತಲೆ ಕೆಡಿಸಿಕೊಳ್ಳಬೇಡ
ಯಾವುದರ ಮೇಲೂ ಹೆಚ್ಚಿನ
ನಿರೀಕ್ಷೆ ಇಟ್ಟುಕೊಳ್ಳಬೇಡ
ಅನಿರೀಕ್ಷಿತವಾಗಿ ಬಂದ ಅವಕಾಶವ
ಎಂದಿಗೂ ಬಿಟ್ಟುಕೊಡಬೇಡ
ಬದುಕು ಎಂದರೆ ಸಂಭ್ರಮ
ಸಂಭ್ರಮಿಸುವುದ ಮರಿಬೇಡ


Leave a Reply

Back To Top